ಬೆಂಗಳೂರು: ಮಗಳು ಆಸ್ತಿಯಲ್ಲಿ ಪಾಲು ಕೇಳಿದಾಗ ಈ ಹಿಂದೆ ಆಕೆಯ ಮದುವೆ ಸಂದರ್ಭದಲ್ಲಿ ಗಂಡನ ಮನೆಯವರು ವರದಕ್ಷಿಣೆ ರೂಪದಲ್ಲಿ ಪಡೆದ ಆಸ್ತಿಯನ್ನೂ ಸೇರಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹಿಂದೆ ಪಡೆದ ವರದಕ್ಷಿಣೆ ಆಸ್ತಿಯನ್ನೂ ಕೂಡ ಡಿವೈಡ್ ಆಗುವಾಗ ಪರಿಗಣನೆ ಮಾಡಬೇಕು. ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಮಗಳು ಆಸ್ತಿ ಕೇಸ್ ಹಾಕುವಾಗ ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನೂ ಅರ್ಜಿಯಲ್ಲಿ ಸೇರಿಸ್ಬೇಕು. ಭಾಗ ಕೇಳಿದಾಗ ವರದಕ್ಷಿಣೆ ಪಡೆದ ಆಸ್ತಿಗಳನ್ನು ಅರ್ಜಿಯಲ್ಲಿ ಸೇರಿಸಬೇಕು ಅಂತಾ ನ್ಯಾಯಮೂರ್ತಿ ಸೂರಜ್ ಗೋವಿಂದರಾಜರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಹೇಮಲತಾ ಅನ್ನೋರು ಸಹೋದರರ ವಿರುದ್ಧ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 6 ಅಡಿಯಲ್ಲಿ ಆಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ಹೇಮಲತಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಹೋದರಿಯ ಅರ್ಜಿಗೆ ವಿರುದ್ಧವಾಗಿ ಆಕೆಯ ಮದುವೆ ವೇಳೆ ವರದಕ್ಷಿಣೆಗಾಗಿ ಆಸ್ತಿ ನೀಡಿದ್ದೆ. ಅದನ್ನು ಸಹ ಅರ್ಜಿಯಲ್ಲಿ ಅವರು ಸೇರಿಸಬೇಕು ಎಂದು ಸಹೋದರ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಹೇಮಲತಾ ಅರ್ಜಿಯಲ್ಲಿ ವರದಕ್ಷಿಣೆ ಆಸ್ತಿಯನ್ನೂ ಸೇರಿಸುವಂತೆ ಕೋರಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ಕೋರ್ಟ್ 2018 ಆಗಸ್ಟ್ 8 ರಂದು ಅರ್ಜಿಯನ್ನ ಮಾರ್ಪಾಡು ಮಾಡುವಂತೆ ಸೂಚನೆ ನೀಡಿತ್ತು.
ವಾದ-ಪ್ರತಿವಾದ:
ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಹೇಮಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ನಮಗೆ ಇರೋದು ವರದಕ್ಷಿಣೆಯ ಆಸ್ತಿಯಲ್ಲ. ಮಾವ ಮತ್ತು ಗಂಡ ಸ್ವಂತ ಹಣದಿಂದ ಸಂಪಾದನೆ ಮಾಡಿರೋದು ಅದು. ಸಿವಿಲ್ ಕೋರ್ಟ್ ಆದೇಶ ನ್ಯಾಯ ಸಮ್ಮತವಾಗಿಲ್ಲ. ಹೀಗಾಗಿ ಇದನ್ನು ಆಸ್ತಿ ವಿಭಜನೆಯಲ್ಲಿ ಸೇರಿಸಬೇಕಾಗಿಲ್ಲ ಎಂದು ಆಕೆಯ ಪರ ವಕೀಲರು ವಾದ ಮಂಡಿಸಿದ್ದರು.
ಮದುವೆ ವೇಳೆ ಆಸ್ತಿ ಕೊಟ್ಟಿದ್ದೇವೆ. ಮದುವೆ ವೇಳೆ ಹೇಮಲತಾಗೆ ಉಡುಗೊರೆಯಾಗಿ ಆಸ್ತಿಯನ್ನ ನೀಡಲಾಗಿದೆ. ಹೀಗಾಗಿ ಆ ಆಸ್ತಿಯನ್ನ ಅರ್ಜಿಯಲ್ಲಿ ಸೇರಿಸಿಬೇಕು ಎಂದು ಮಗನ ಪರ ವಕೀಲರು ವಾದ ಮಂಡಿಸಿದ್ದರು.
ಹೈಕೋರ್ಟ್ ಆದೇಶ:
ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಅರ್ಜಿದಾರರು ಆಸ್ತಿ ಪಡೆದಿದ್ದರೆ ಸೇರಿಸಬೇಕು. ಮೂಲ ಆಸ್ತಿಯ ವಿಭಜನೆ ಬಂದಾಗ ಆ ಆಸ್ತಿಯನ್ನ ಪರಿಗಣನೆ ಆಗಬೇಕು. ಮಗಳು ವರದಕ್ಷಿಣೆ ರೂಪದಲ್ಲಿ ಆಸ್ತಿ ಪಡೆದಿದ್ರೂ ಸಹ ಸೇರಿಸಿ ಭಾಗವಾಗ್ಬೇಕು. ಮಗಳು ಅದನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ್ರೆ ಸೇರಿಸಬೇಕಾಗಿರುವುದಿಲ್ಲ. ಈ ಕೇಸ್ನಲ್ಲಿ ಅದು ವರದಕ್ಷಿಣೆ ಇಲ್ಲ, ಖರೀದಿ ಅನ್ನೋದು ನಿರ್ಧಾರ ಆಗ್ಬೇಕು. ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯ ವಿಚಾರಣೆಯಲ್ಲಿ ನಿರ್ಧರಿಸಲಿ ಎಂದು ಹೈಕೋರ್ಟ್ ಆದೇಶ ನೀಡಿದೆ.