ವಿಟ್ಲ: ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆಯ ಸಂಕಲ್ಪಕ್ಕಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಶಿವರಾತ್ರಿ ಮತ್ತು ಶಿವಮಾಲಧಾರಣೆಯ ಪ್ರಯುಕ್ತ ಮಾ.1 ರಂದು ಸಂಜೆ 6:30ಕ್ಕೆ ಏಕ ಕಾಲದಲ್ಲಿ 1ಕೋಟಿ ಶಿವಪಂಚಾಕ್ಷರಿ ನಾಮ ಜಪ ನಡೆಯಲಿದ್ದು, ಈ ನಿಟ್ಟಿನಲ್ಲಿ ಇಂದು ಹಿಂದೂ ಜಾಗರಣ ವೇದಿಕೆ ಮಾಣಿ ವಲಯದ ವತಿಯಿಂದ ಕಡೇಶಿವಾಲಯ ಶ್ರೀಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಶಿವಮಾಲಧಾರಣೆ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಗಳು ಸಂಕಲ್ಪಿತರಿಗೆ ಶಿವಮಾಲಧಾರಣೆಗೈದರು. ಹಿಂದೂ ಜಾಗರಣ ವೇದಿಕೆಯ ಪ್ರಾಂತ, ಜಿಲ್ಲಾ, ತಾಲೂಕು ಮುಖಂಡರು ಹಾಗೂ ಕಾರ್ಯಕರ್ತರು ಶಿವಮಾಲಧಾರಣೆಯಲ್ಲಿ ಪಾಲ್ಗೊಂಡಿದ್ದರು.