ವಿಟ್ಲ: ಸಾಮಾಜಿಕತಾಣದಲ್ಲಿ ಸಂಸದರ ಬಗ್ಗೆ ಪೋಸ್ಟ್ ಮಾಡಿದನೆಂಬ ಕಾರಣಕ್ಕಾಗಿ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನನ್ನು ಸ್ವ ಪಕ್ಷದ ವಿಟ್ಲದ ನಾಯಕನೊಬ್ಬನ ಮಾತಿನಂತೆ ಬೆಳ್ಳಂಬೆಳಗ್ಗೆ ವಿಟ್ಲ ಪೊಲೀಸರು ಠಾಣೆಗೆ ಕರೆತಂದ ಅಪರೂಪದ ಘಟನೆ ವಿಟ್ಲದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ವಾಟ್ಸಪ್ ಗ್ರೂಪ್ ಒಂದರಲ್ಲಿ ನಿನ್ನೆ ರಾತ್ರಿ ಈತ ಸಂಸದರ ಬಗ್ಗೆ ಪೋಸ್ಟ್ ಮಾಡಿದ್ದ ಹಾಗೂ ತುಸು ಸಮಯದ ಬಳಿಕ ಗ್ರೂಪ್ ನಿಂದ ಹೊರ ಹೋಗಿದ್ದ.
ಈತನನ್ನು ಪೋಲಿಸ್ ಠಾಣೆಗೆ ಕರೆ ತಂದ ವಿಷಯ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ವಶದಲ್ಲಿದ್ದ ವ್ಯಕ್ತಿ ಮಾಡಿದ ಪೋಸ್ಟ್ ನಲ್ಲಿ ಯಾವುದೇ ಕೆಟ್ಟ ಹಾಗೂ ಅವಮಾನ ಮಾಡುವಂತಹ ಯಾವುದೇ ವಿಷಯ ಇಲ್ಲ ಎಂವುದುದನ್ನು ತಿಳಿಸಿ ಆತನನ್ನು ಬಿಡುಗಡೆ ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಪೋಸ್ಟ್ ಮಾಡಿದ ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಸದ್ಯ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿದು ಬಂದಿದೆ.