ಬೆಳ್ತಂಗಡಿ: ಭಾರೀ ವಿವಾದಗಳಿಗೆ, ಪ್ರತಿಭಟನೆಗೆಳಿಗೆ ಕಾರಣವಾಗಿದ್ದ ಅರಣ್ಯ ಸಂಚಾರಿ ದಳದ ಉಡುಪಿ ವಲಯದ ಅರಣ್ಯಾಧಿಕಾರಿ ಮಂಗಳೂರಿನಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಅವರನ್ನು ಬೀದರಿಗೆ ವರ್ಗಾವಣೆ ಮಾಡಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಕೆಎಟಿ ಆದೇಶ ಹೊರಡಿಸಿದೆ.
ಸರಕಾರದ ವರ್ಗಾವಣೆ ಆದೇಶದ ವಿರುದ್ದ ಸಂಧ್ಯಾ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಅಪೀಲು ಸಲ್ಲಿಸಿದ್ದರು.
ಪರಿಶೀಲನೆ ನಡೆಸಿದ ನ್ಯಾಯ ಮಂಡಳಿ ಈ ವರ್ಗಾವಣೆ ರಾಜಕೀಯ ಪ್ರೇರಿತ ವರ್ಗಾವಣೆಯಾಗಿದ್ದು ವರ್ಗಾವಣೆಯಲ್ಲಿ ನೀತಿ ನಿಯಮ ಪಾಲಿಸಿಲ್ಲ. ರಾಜಕೀಯ ಹಸ್ತಕ್ಷೇಪ ನಡೆದಿರುವುದು ಕಂಡು ಬರುತ್ತದೆ ಎಂದು ಪರಿಗಣಿಸಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು ಅವರನ್ನು ಹಿಂದೆ ಇದ್ದ ಹುದ್ದೆಗೆ ಮರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.