ಬೆಳ್ತಂಗಡಿ : ದಕ್ಷಿಣ ಕನ್ನಡದ ಉಜಿರೆಯಲ್ಲಿ ಅಕ್ರಮ ಗೋ ಸಾಗಾಟ ಜಾಲವನ್ನು ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ.
ಮಾಹಿತಿ ಪಡೆದ ಕಾರ್ಯಕರ್ತರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳು ಮತ್ತು ವಾಹನವನ್ನು ಸ್ಥಳೀಯ ಪೋಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ.
ಪಿಕಪ್ ವಾಹದಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಎರಡು ದನಗಳನ್ನು ಕಾರ್ಯಕರ್ತರು ರಕ್ಷಿಸಿದ್ದಾರೆ.ಯಾವುದೇ ದಾಖಲೆಗಳಿಲ್ಲದ ಒಂದು ಪಿಕಪ್ ವಾಹನ ಮತ್ತು ಅದರಲ್ಲಿದ್ದ ಇಬ್ಬರನ್ನು ಪೋಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಮನೆ ಮನೆಗೆ ಗುಜಿರಿ ಸಾಗಟದ ನೆಪದಲ್ಲಿ ದನ ಇದ್ದ ಮನೆಗಳ ಮಾಹಿತಿಯನ್ನು ನೀಡಿ ದನ ಸಾಗಿಸುವ ದಂದೆ ನಡೆಯುತ್ತಿದ್ದು ಇದಕ್ಕೆ ಪೋಲೀಸರು ಕಡಿವಾಣ ಹಾಕಬೇಕಿದೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.