ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ. ಜಿ. ಪೇರರಿವಾಲನ್‌ಗೆ ಜಾಮೀನು ಮಂಜೂರು ಮಾಡಿದೆ. ಹತ್ಯೆ ಪ್ರಕರಣದ 7 ಅಪರಾಧಿಗಳಲ್ಲಿ ಪೇರರಿವಾಲನ್ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ನ್ಯಾಯಮೂರ್ತಿ ನಾಗೇಶ್ವರರಾವ್ ಮತ್ತು ನ್ಯಾಯಮೂರ್ತಿ ಬಿ. ಆರ್. ಗಾವಿ ಅವರಿದ್ದ ವಿಭಾಗೀಯ ಪೀಠ ಬುಧವಾರ ಎ. ಜಿ. ಪೇರರಿವಾಲನ್‌ಗೆ ಜಾಮೀನು ನೀಡಿದೆ.
32 ವರ್ಷಗಳಿಂದ ಎ. ಜಿ. ಪೇರರಿವಾಲನ್ ಜೈಲಿನಲ್ಲಿದ್ದಾರೆ. 1991ರಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ. ಜಿ. ಪೇರರಿವಾಲನ್‌ಗೆ 30 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬ ಅಂಶದ ಆಧಾರದ ಮೇಲೆಯೇ ಜಾಮೀನು ಮಂಜೂರು ಮಾಡಲಾಗಿದೆ.
ಎ. ಜಿ. ಪೇರರಿವಾಲನ್ ಸದ್ಯ ಪೆರೋಲ್ ಮೇಲೆ ಇದ್ದಾರೆ. ಈಗಾಗಲೇ ಮೂರು ಬಾರಿ ಅವರಿಗೆ ಪೆರೋಲ್ ನೀಡಲಾಗಿದೆ.
ಜಾಮೀನು ನೀಡುವಾಗ ಪ್ರತಿ ವಾರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಬೇಕು ಎಂದು ಷರತ್ತು ಹಾಕಲಾಗಿದೆ.