ಪಂಜಾಬ್: ಹೊಸ ಸರ್ಕಾರದ ಆಡಳಿತಕ್ಕೆ ಸಿದ್ಧವಾಗಿರೋ ಪಂಜಾಬ್‌ನಲ್ಲಿ ಶೂಟೌಟ್ ನಡೆದಿದೆ. ಆಟದ ಮೈದಾನದಲ್ಲೇ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರಿಗೆ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಎಸ್ಕೇಪ್ ಆಗಿದ್ದಾರೆ. ಜಲಂಧರ್ ಜಿಲ್ಲೆಯ ನಾಕೋಡರ್‌ನ ಮಲ್ಲಿಯನ್ ಖುರ್ದ್ ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.
40 ವರ್ಷ ವಯಸ್ಸಿನ ಸಂದೀಪ್ ಸಿಂಗ್ ನಂಗಲ್ ಅಂಬಿಯನ್ ಹತ್ಯೆಗೀಡಾದ ಕಬಡ್ಡಿ ಆಟಗಾರ.
ಕಬಡ್ಡಿ ಟೂರ್ನಿಮೆಂಟ್ ನಡೆಯುತ್ತಿದ್ದಾಗಲೇ ಕಾರಿನಲ್ಲಿ ಆಗಮಿಸಿದ ನಾಲ್ವರು ಅಪರಿಚಿತರು ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ. ಸಂದೀಪ್ ಪಂದ್ಯಾವಳಿ ಸ್ಥಳದಿಂದ ಹೊರಬಂದಾಗ 8ರಿಂದ 10 ಸುತ್ತು ಗುಂಡು ನುಗ್ಗಿಸಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮರಗಳ ಮರೆಯಲ್ಲಿ ಹೊಂಚು ಹಾಕಿ ನಿಂತಿದ್ದ ದುಷ್ಕರ್ಮಿಗಳು ಸಂದೀಪ್ ಆಟದ ಸ್ಥಳದಿಂದ ಹೊರಗೆ ಬರುತ್ತಲೇ ಶೂಟೌಟ್ ಮಾಡಿದ್ದಾರೆ. ಸಂದೀಪ್ ಅವರನ್ನ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರ ಮೊಬೈಲ್‌ನಲ್ಲಿ ಶೂಟೌಟ್ ಸೆರೆಯಾಗಿದ್ದು, ಆ ವಿಡಿಯೋ ವೈರಲ್ ಆಗಿದೆ.
ಪಂಜಾಬ್‌ನ ಶಾಕೋಟ್‌ನ ನಂಗಲ್ ಅಂಬಿಯಾನ್ ಗ್ರಾಮದ ಸಂದೀಪ್ ಸದ್ಯ ಕುಟುಂಬ ಸಮೇತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ಅವರು ಬ್ರಿಟನ್ ಪೌರತ್ವ ಪಡೆದಿದ್ದರು. ಇಂಗ್ಲೆಂಡ್‌ನಲ್ಲಿ ನೆಲೆಸಿದ್ರೂ ತವರು ರಾಜ್ಯ ಪಂಜಾಬ್ ಮರೆತಿರಲಿಲ್ಲ. ಆಗಾಗ ಪಂಜಾಬ್‌ನಲ್ಲಿ ಕಬಡ್ಡಿ ಟೂರ್ನಿಮೆಂಟ್ ಆಯೋಜನೆ ಮಾಡ್ತಿದ್ರು. ಹೀಗೆ ನಿನ್ನೆ ಟೂರ್ನಿ ಆಯೋಜನೆ ಮಾಡಿದ್ದಾಗ ಈ ಘಟನೆ ನಡೆದಿದೆ. ಶಿರೋಮಣಿ ಅಕಾಲಿ ದಳದ ಮುಖಂಡ ಸುಖ್ಬಿರ್ ಸಿಂಗ್, ಈ ಘಟನೆ ಖಂಡಿಸಿದ್ದು, ಕೊಲೆಗಾರರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ಪಂಜಾಬ್ ಬೆಚ್ಚಿಬಿದ್ದಿದೆ.
40-year-old international kabaddi player, Sandeep Singh Nangal Ambian, was shot dead by armed assailants at Mallian Khurd village in Nakodar (district Jalandhar) today evening. @ndtv pic.twitter.com/LlHbUrqtKw
— Simar Bhinder (@bhinder_simar) March 15, 2022