ಪುತ್ತೂರು: ದೇಶಾದ್ಯಂತ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿರೋ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಸಖತ್ ಸೌಂಡ್ ಮಾಡ್ತಿದೆ. ದಿನೆ ದಿನೇ ತನ್ನ ಸ್ಕ್ರೀನ್ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರೋ ಸಿನೆಮಾ ಪರ-ವಿರೋಧಕ್ಕೂ ಕಾರಣವಾಗಿದೆ.
ಅದೇ ರೀತಿ ಪುತ್ತೂರಿನ ಖ್ಯಾತ ಚಿತ್ರಮಂದಿರವಾದ ಅರುಣಾ ಥಿಯೇಟರ್ ನಲ್ಲಿ ನಾಳೆಯಿಂದ (ಮಾ.17) ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ ಕಾಣಲಿದೆ.
ಅರುಣಾ ಚಿತ್ರಮಂದಿರ ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಕಾರ್ಯಾ ನಿರ್ವಹಿಸುತ್ತಿದ್ದು, ಉತ್ತಮ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪುತ್ತೂರಿನ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’. ದೇಶಾದ್ಯಂತ ಹೊಸ ಚರ್ಚೆ ಹುಟ್ಟುಹಾಕಿರೋ ಬಾಲಿವುಡ್ ಸಿನಿಮಾವಾಗಿದ್ದು, 1980 ರಿಂದ 1990ರ ನಡುವೆ ಕಾಶ್ಮೀರದ ಪಂಡಿತರ ಮೇಲಿನ ಭೀಕರ ದೌರ್ಜನ್ಯವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗಿದೆ. ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದ್ದು, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸಂಪೂರ್ಣ ತೆರಿಗೆ ವಿನಾಯ್ತಿ ಪಡೆದುಕೊಂಡು ತೆರೆ ಕಂಡಿದೆ.



























