ನವದೆಹಲಿ: ಹಿಜಾಬ್ ವಿವಾದ ಕುರಿತಂತೆ ನಿನ್ನೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಇಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆದರೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ನ ಸಿಜೆಐ ನೇತೃತ್ವದ ಪೀಠವೂ ನಿರಾಕರಿಸಿದೆ.
ವಕೀಲ ಹೆಗ್ಡೆ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಹಿಜಾಬ್ ವಿಚಾರ ತುರ್ತು ಇದೆ. ಸೋಮವಾರ ಪಟ್ಟಿ ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಹೆಗ್ಡೆ ಅವರ ಮನವಿಯನ್ನು ಸಿಐಜೆ ನಿರಾಕರಿಸಿ, ಹೋಳಿ ರಜೆಯ ನಂತರ ನಾವು ಅದನ್ನು ಸೂಕ್ತವಾಗಿ ಪಟ್ಟಿ ಮಾಡುತ್ತೇವೆ ಎಂದು ತಿಳಿಸಿದ್ದರು. ಆ ಬಳಿಕವೂ ಸಿಜೆಐ ಅರ್ಜಿಯ ವಿಚಾರಣೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮತ್ತೊಮ್ಮೆ ಸಿಐಜೆಗೆ ಮನವಿ ಮಾಡಿದ ಹೆಗ್ಡೆ ಅವರು, ತುರ್ತು ವಿಷಯವೆಂದರೆ ಹಲವಾರು ಹುಡುಗಿಯರು ಕಾಲೇಜುಗಳಿಗೆ ಹಾಜರಾಗಬೇಕಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ, ಈ ವಿಚಾರ ಇತರರು ಕೂಡ ಪ್ರಸ್ತಾಪಿಸಿದ್ದಾರೆ. ಹೋಳಿ ರಜೆಯ ನಂತರ ನಾವು ವಿಷಯವನ್ನು ಪೋಸ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.




























