ಪುತ್ತೂರು: ಕೆದಂಬಾಡಿ ಗಾಮ ಪಂಚಾಯತ್ ಹಾಗೂ ಆಸರೆ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಸಂಜೀವಿನಿ ಗ್ರಾಮೀಣ ರೈತ ಸಂತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತನ್ ರೈ ರವರು ಉದ್ಘಾಟಿಸಿ ಮಹಿಳೆಯರು ಸ್ವಾವಲಂಬಿಗಳಾಗಲು ಒಳ್ಳೆಯ ಅವಕಾಶ ಎಂದು ಶುಭ ಹಾರೈಸಿದರು.
ಪುತ್ತೂರು, ಕಡಬ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ರವರು ಮಾತಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಮ್ಮ ಮನೆಯಲ್ಲಿ ಬೆಳೆದ ತರಕಾರಿ,ಹಾಗೂ ಇತರ ಆಹಾರೋತ್ಪನ್ನ ಗಳನ್ನು ಮಾರಾಟ ಮಾಡಲು ಒಳ್ಳೆಯ ಅವಕಾಶ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಜಿತ್ , ಉಪಾಧ್ಯಕ್ಷರಾದ ಭಾಸ್ಕರ್ ರೈ ಮಿತ್ರಂಪಾಡಿ, ಪಂಚಾಯತ್ ಸದಸ್ಯರು ಆಸರೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಎ ಗ್ರೆಡ್ ಸುನಂದಾ ರವರು ಕಾರ್ಯಕ್ರಮ ನಿರೂಪಿಸಿದರು.
ಎಲ್. ಸಿ ಆರ್. ಪಿ. ಪೂರ್ಣಿಮಾ ವಂದನಾರ್ಪಣೆ ಗೈದರು . ಎಂಬಿಕೆ ಶುಭ, ಎಲ್. ಸಿ ಆರ್. ಪಿ. ಜಯಲತಾ, ಬಿ.ಆರ್. ಪಿ-ಇಪಿ ಕಮಲಾಕ್ಷಿ ಸಂಘಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.