ಪುತ್ತೂರು: ಉತ್ತರ ಪ್ರದೇಶ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರ ಪರವಾಗಿ ಹಾಕಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ಸುರುಳಿಮೂಲೆ ಎಂಬಲ್ಲಿ ನಡೆದಿದೆ.
ಸುರುಳಿಮೂಲೆಯಲ್ಲಿ ಟೀಮ್ ನಮೋ ವತಿಯಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಕ್ಕಾಗಿ ಶುಭಕೋರಿ ಬ್ಯಾನರ್ ಒಂದನ್ನು ಅಳವಡಿಸಿದ್ದು, ಬ್ಯಾನರ್ ಗೆ ಆಯಿಲ್ ಎರಚುವ ಮೂಲಕ ಕಿಡಿಗೇಡಿಗಳು ಅದನ್ನು ಹಾನಿಗೊಳಿಸಿದ್ದಾರೆ.
ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿರಬಹುದೆಂದು ಸಾರ್ವಜನಿಕ ಶಂಕೆ ವ್ಯಕ್ತ ಪಡಿಸುತ್ತಿದ್ದು, ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


























