ವಿಟ್ಲ: ಆನಂದಾಶ್ರಮ ಸೇವಾ ಟ್ರಸ್ಟ್(ರಿ.) ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಸಿಟಿ, ಗ್ರಾಮ ಪಂಚಾಯತ್ ವಿಟ್ಲಪಡ್ನೂರು, ವಿಟ್ಲಪಡ್ನೂರು ಸೇವಾ ಸಹಕಾರಿ ಬ್ಯಾಂಕ್, ಶಿಲ್ಪಶ್ರೀ ಯುವಕ ಮಂಡಲ(ರಿ.) ಕೊಡಂಗಾಯಿ ಇದರ ಜಂಟಿ ಆಶ್ರಯದಲ್ಲಿ ಮಾ.25 ರಂದು ‘ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ’ ಪಂಚಾಯತ್ ಸಭಾಭವನ ವಿಟ್ಲಪಡ್ನೂರು ಕೊಡಂಗಾಯಿಯಲ್ಲಿ ನಡೆಯಲಿದೆ.
ಮಾ.25 ರಂದು ಬೆಳಿಗ್ಗೆ 9 ಗಂಟೆಯಿಂದ ಶಿಬಿರ ನಡೆಯುವ ಸ್ಥಳದಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.





























