ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಿಸ್ಟರ್ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ವಿದಾಯ ಹೇಳಿ, ರವೀಂದ್ರ ಜಡೇಜಾಗೆ ಉತ್ತರಾಧಿಕಾರಿ ಸ್ಥಾನವನ್ನ ಹಸ್ತಾಂತರಿಸಿದ್ದಾರೆ.
ಐಪಿಎಲ್ 2022ರ ಸೀಸನ್ ಆರಂಭಕ್ಕೂ ಮುನ್ನ ಧೋನಿ ಸಂವೇದನಾಶೀಲ ನಿರ್ಧಾರವನ್ನ ಕೈಗೊಂಡಿದ್ದಾರೆ. ನಾಯಕತ್ವದಿಂದ ಕೆಳಗಿಳಿದಿದ್ದರೂ ಸಹ, ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2022ರ ಋತುವಿನಲ್ಲಿ ಸಿಎಸ್ಕೆ ಪರ ಆಟಗಾರ ಮತ್ತು ವಿಕೆಟ್ ಕೀಪರ್ ಆಗಿ ಮುಂದುವರಿಯುತ್ತಾರೆ.
ಈ ಬೆಳವಣಿಗೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಖಾತ್ರಿ ಪಡಿಸಿದೆ. ಈ ಮೂಲಕ ಐಪಿಎಲ್ 2022 ಟೂರ್ನಿಯೊಂದಿಗೆ ದಿಗ್ಗಜ ಎಂಎಸ್ ಧೋನಿ ಅವರ ಟಿ20 ವೃತ್ತಿಬದುಕು ಅಂತ್ಯಗೊಳ್ಳುವುದು ಬಹುತೇಕ ಖಾತ್ರಿ ಎಂಬಂತ್ತಾಗಿತ್ತು. ಏಕೆಂದರೆ 40 ವರ್ಷದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಆದರೆ, ನಾಯಕತ್ವ ಇಲ್ಲದೆ ಮುಂದಿನ ಎರಡು ಆವೃತ್ತಿಗಳಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಮುಂದುವರಿಯುವುದಾಗಿ ಧೋನಿ ಹೇಳಿದ್ದಾರೆ ಎಂದು ಚೆನ್ನೈ ತಂಡ ತನ್ನ ಅಧಿಕೃತ ಹೇಳಿಕೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಇದರೊಂದಿಗೆ ಐಪಿಎಲ್ 2023 ಮತ್ತು 2024 ಆವೃತ್ತಿಗಳಲ್ಲೂ ಧೋನಿ ಆಡುವುದು ಖಾತ್ರಿಯಾಗಿದೆ.




























