ಪುತ್ತೂರು: ಜೆಸಿಐ ಸೀನಿಯರ್ ಮೆಂಬರ್ ಅಸೋಸಿಯೇಷನ್ ನ ವಲಯ ಐದಿನೈದರ ಪ್ರಥಮ ವಲಯಾಧ್ಯಕ್ಷರಾಗಿ ಜಗನ್ನಾಥ್ ರೈ ರವರು ಆಯ್ಕೆಯಾಗಿದ್ದು, ಪದಗ್ರಹಣ ಕಾರ್ಯಕ್ರಮವು ಮಾ.27 ರಂದು ಮರೀಲ್ ದ ಪುತ್ತೂರು ಕ್ಲಬ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೆಸಿಐ ಸೀನಿಯರ್ ಮೆಂಬರ್ ಅಸೋಸಿಯೇಷನ್ ನ ರಾಷ್ಟ್ರೀಯ ಚೇರ್ ಮೆನ್ ಸಂಜಯ್ ಮಂಕಡ್ ರವರು ಆಗಮಿಸಲಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಂತೆ ವಲಯ 15ರ ಜೆಸಿಐ ಸೀನಿಯರ್ ಮೆಂಬರ್ ಅಸೋಸಿಯೇಷನ್ ವಲಯಾಧ್ಯಕ್ಷರಾಗಿ ಜಗನ್ನಾಥ್ ರೈ ರವರು ಆಯ್ಕೆಯಾಗಿದ್ದು, ಈ ಆಯ್ಕೆ ಪ್ರಕ್ರಿಯೆ 2021 ರಲ್ಲಿ ನಡೆದಿದ್ದು, ಈ ಅವಧಿಯಲ್ಲಿ 105 ಸದಸ್ಯರನ್ನೊಳಗೊಂಡ ತಂಡ ರಚನೆಯಾಗಿದ್ದು, ಈ ಸಮಿತಿಯ ಪದಗ್ರಹಣ ಸಮಾರಂಭ ಮಾ.27 ರಂದು ಜೆಸಿಐ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ.


























