ಕಡಬ: ಕಲ್ಲುಗುಂಡಿಯಲ್ಲಿ ಒತ್ತೆಕೋಲ ವೀಕ್ಷಣೆಗೆಂದು ಬಂದ ಯುವಕರ ತಂಡವೊಂದು ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರು ಆಗಮಿಸಿ ಅವರನ್ನು ಠಾಣೆಗೆ ಕರೆದೊಯ್ದ ಘಟನೆ ಮಾ.28 ರಂದು ನಡೆದಿದೆ.
ಕಲ್ಲುಗುಂಡಿ ಒತ್ತೆಕೋಲಕ್ಕೆಂದು ಆಗಮಿಸಿದ್ದ ಐದು ಮಂದಿ ಯುವಕರ ತಂಡ ಜಾತ್ರೆ ಅಸ್ವಾದಿಸುವುದನ್ನು ಬಿಟ್ಟು ಎರಡು ಬೈಕ್ ಗಳಲ್ಲಿ ಕೈಪಡ್ಕಕ್ಕೆ ತಿರುವಿನಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಬಂದಿದ್ದು, ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಅದೇ ವೇಳೆ ನೈಟ್ ಪ್ಯಾಟ್ ರೋಲಿಂಗ್ ಪೊಲೀಸರ ತಂಡ ಅದೇ ದಾರಿಯಲ್ಲಿ ಬಂದುದರಿಂದ ಅವರ ಕೈಗೆ ಸಿಕ್ಕಿ ಬಿದ್ದಿದ್ದು, 18-20 ವರ್ಷದ ಯುವಕರ ವರ್ತನೆ ಕಂಡು ಪೊಲೀಸರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿರುವುದಕ್ಕೆ ದಂಡ ಕಟ್ಟುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.

























