ಪಬ್ಜಿ ಹುಚ್ಚಿಗೆ ಹುಸಿ ಬಾಂಬ್ ಕರೆ ಮಾಡಿದ ಅಪ್ರಾಪ್ತ ಬಾಲಕನಿಂದ ರೈಲ್ವೆ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಕರೆಯಿಂದ ಸುಮಾರು 90 ನಿಮಿಷಗಳ ಕಾಲ ಕಾಚಿಗುಡ್ಡ ಎಕ್ಸ್ಪ್ರೆಸ್ ತಡವಾಗಿ ಹೊರಡಬೇಕಾಯ್ತು. ಬಾಲಕನ ಸ್ನೇಹಿತ ಕಾಚಿಗೋಡ ಎಕ್ಸ್ ಪ್ರೆಸ್ ರೈಲಿನನಲ್ಲಿ ಊರಿಗೆ ತೆರಳುತ್ತಿದ್ದ. ತನ್ನ ಪಬ್ಜಿ ಪಾಟ್ನರ್ ಊರಿಗೆ ಹೋಗುತ್ತಿರೋದನ್ನ ತಡೆದು ಗೇಮ್ನಲ್ಲಿ ವಿನ್ ಆಗಲು ಬಾಲಕ ಈ ರೀತಿ ಹುಸಿ ಕರೆ ಮಾಡಿದ್ದಾನೆ.
ರೈಲ್ವೇ ಕಂಟ್ರೋಲ್ ರೂಂಗೆ ಬಾಲಕ ಕರೆ ಮಾಡಿದ ಹಿನ್ನೆಲೆ 90 ನಿಮಿಷಗಳ ಕಾಲ ರೈಲನ್ನ ತಪಾಸಣೆ ನಡೆಸಿದ್ದಾರೆ. ಬಳಿಕ ವಿಷಯ ತಿಳಿದ ರೈಲ್ವೇ ಪೊಲೀಸರು ಬಾಲಕ ಅಪ್ರಾಪ್ತನಾದ ಕಾರಣ ಬಂಧಿಸದೇ ಬುದ್ಧಿ ಹೇಳಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.


























