ವಿಟ್ಲ: ಆರ್‌ಎಸ್‌ಎಸ್ ಮುಖಂಡರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಡಾ.ಕಲ್ಲಡ್ಕ ಪ್ರಭಾಕರ ಭಟ್ ರವರು ದಿಢೀರ್ ಲೋ ಬಿಪಿಯಿಂದಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚೇತರಿಕೆಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಏ.5 ಸಂಜೆ ಮನೆಯಲ್ಲಿದ್ದ ವೇಳೆ ಅವರು ದಿಢೀರ್ ಅಸ್ವಸ್ಥರಾಗಿದ್ದ ಪ್ರಭಾಕರ ಭಟ್ ರವರನ್ನು ಕೂಡಲೇ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಲ್ಲಿ ಪರೀಕ್ಷಿಸಿದ ವೈದ್ಯರು ಲೋ ಬಿಪಿಯಿಂದಾಗಿ ಈ ರೀತಿಯಾಗಿರುವುದಾಗಿ ತಿಳಿಸಿದ್ದು, ಡಾ.ಭಟ್ ಅವರು ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.


























