ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 15ನೇ ಆವೃತ್ತಿ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಯುವ ಹಾಗೂ ಅನುಭವಿ ಆಟಗಾರರು ತಮ್ಮ ಬೌಲಿಂಗ್, ಬ್ಯಾಟಿಂಗ್ ಮಾತ್ರದಲ್ಲದೇ ಎದುರಾಳಿ ತಂಡದ ಆಟಗಾರರ ನಡುವಿನ ಬಾಂಧವ್ಯವೂ ಅಭಿಮಾನಿಗಳು ಮತ್ತಷ್ಟು ಖುಷಿಯಾಗಲು ಕಾರಣವಾಗಿದೆ. ಈ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಸ್ಟೇಡಿಯಂನಲ್ಲಿ ದೆಹಲಿ ಹಾಗೂ ಗುಜರಾತ್ ತಂಡಗಳ ನಡುವಿನ ಪಂದ್ಯದ ವೇಳೆ ಕಂಡು ಬಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕ್ರೀಡಾಂಗಣದಲ್ಲಿ ಪಂದ್ಯ ಸಾಗುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವ ಜೋಡಿಯೊಂದು ರೊಮ್ಯಾಟಿಕ್ ಆಗಿ ಕಿಸ್ ಮಾಡುತ್ತಿದ್ದ ದೃಶ್ಯ ಲೈವ್ನಲ್ಲಿ ಪ್ರಸಾರವಾಗಿದೆ.
ಈ ದೃಶ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಉದ್ಯಮಿ ಚಿರಾಗ್ ಬರ್ಜಾತ್ಯಾ, ಐಪಿಎಲ್ನಲ್ಲಿ ಕಿಸ್ ಕ್ಯಾಮ್ಅನ್ನು ಪ್ರಾರಂಭ ಮಾಡಬೇಕು. ಇದು ತುಂಬಾ ವಿನೋದಮಯವಾಗಿರುತ್ತದೆ. ಅಲ್ಲದೇ ಜನರ ನಡುವೆ ಮತ್ತಷ್ಟು ಪ್ರೀತಿ ಹೆಚ್ಚು ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಈ ಫೋಟೋ ಬಗ್ಗೆ ಹಲವರು ನೆಟ್ಟಿಗರು ತಮ್ಮದೇ ಪ್ರತಿಕ್ರಿಯೆ ನೀಡಿದ್ದು, ಈ ಜೋಡಿ ಐಪಿಎಲ್ಅನ್ನು ಮತ್ತೊಂದು ಲೆವೆಲ್ಗೆ ಕರೆದುಕೊಂಡು ಹೋಗಿದೆ. ನನ್ನ ದೇಶ ಬದಲಾಗುತ್ತಿದೆ. ಅವರಿಬ್ಬರು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
Couples kissing in Single me:-
— Pintukumar (@Kumarpintu12171) April 3, 2022
Cinema hall:- Looking at be like;- pic.twitter.com/4o8RcuCw26