ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವುಗೊಳಿಸಬೇಕು ಹಾಗೂ ವಲಯ ಅರಣ್ಯದ ಅತಿಕ್ರಮಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎ.11 ರಂದು ಸುಳ್ಯ ವಲಯಾರಣ್ಯಾ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಎ.11 ರಂದು ಸುಳ್ಯ ಶಾಸ್ತ್ರೀ ಸರ್ಕಲ್ ನಿಂದ ವಲಯಾರಣ್ಯಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯೊಂದಿಗೆ ಬಂದು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ನಿನ್ನೆ ಮಾಧ್ಯಮಗಳಲ್ಲಿ ವರದಿಯಾದ ಹಾಗೆ ಈ ಅಕ್ರಮ ಕಟ್ಟಡ ತೆರವಿಗೆ ತಾತ್ಕಾಲಿಕವಾದಂತಹ ಕೋರ್ಟ್ ಆದೇಶವನ್ನು ತಂದಿದ್ದಾರೆ. ಇದು ಅಕ್ರಮ ಕಟ್ಟಡದ ಮತ್ತು ದೋಷಪೂರಿತ ಅರಣ್ಯ ಪ್ರದೇಶವನ್ನು ವಶಪಡಿಸಿ, ಅಕ್ರಮವಾಗಿ ಪ್ರವೇಶಿಸಿ ತೆರವುಗೊಳಿಸುವ ಆದೇಶಕ್ಕೆ ತಾತ್ಕಾಲಿಕವಾದಂತಹ ತಡೆಯಾಗಿದೆ. ವಿನಃ ಎ.11 ರಂದು ನಡೆಯುವ ಪ್ರತಿಭಟನೆಗೆ ಯಾವುದೇ ತಡೆಯಿಲ್ಲ.
ಜಾಗೃತ ಹಿಂದೂ ಸಮಾಜದ ಎಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿಬೇಕು. ಆಗುತ್ತಿರುವ ಅಕ್ರಮದ ವಿರುದ್ಧ ಹೋರಾಟ ನಡೆಸಲು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕಾಗಿದೆ, ನಾವೆಲ್ಲರೂ ಒಂದಾಗಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸೋಣ ಎಂದರು.
ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಲತೇಶ್ ಗುಂಡ್ಯ ಮಾತನಾಡಿ, ಈ ಪ್ರತಿಭಟನಾ ಸಭೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಸಂಪೂರ್ಣ ಬೆಂಬಲವನ್ನು ಘೋಷಣೆ ಮಾಡಿದರು. ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಈ ಅಕ್ರಮ ಮತ್ತು ಅರಣ್ಯ ಇಲಾಖೆಯ ಬೇಜವಾಬ್ದಾರಿಯನ್ನು ಖಂಡಿಸಿ ಪ್ರತಿಭಟಿಸೋಣ ಎಂದು ಹೇಳಿದರು.




























