ಬೆಂಗಳೂರು: ಬ್ಯುಸಿನೆಸ್ ಮೀಟಿಂಗ್ ಅಂತೇಳಿ ಮನೆಯಿಂದ ಹೊರಟ್ಟಿದ್ದ ಯುವತಿ ನಾಲ್ಕು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮಲ್ಲೇಶ್ವಂರ ನಿವಾಸಿಯಾಗಿರೋ ಸುನೀತ ಕೊಲೆಯಾದ ದುದೈವಿಯಾಗಿದ್ದು, 13ನೇ ಕ್ರಾಸ್ ನಲ್ಲಿರೋ ಅಭಿರಾಮ್ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದರು.
ಫ್ಯಾಮಿಲಿ ಮೆಂಬರ್ಸ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇನ್ನು ಆಸ್ತಿ ಪಾಸ್ತಿಯಲ್ಲಿಯೂ ಪುಲ್ ಸೆಟಲ್ಡ್ ಫ್ಯಾಮಿಲಿ. ಹೀಗಿದ್ರು ಯಾರಿಗೂ ಭಾರವಾಗ್ಬಾರ್ದು ಅಂತ ಥಿಂಕ್ ಮಾಡ್ತಿದ್ದ ಸುನೀತ ತನ್ನದೇ ಆದ ಇ-ಕಾಮರ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸ್ತಿದ್ರು. ಸದಾ ಅಲ್ಲಿ ಇಲ್ಲಿ ಮನೆಗಳನ್ನ ನೋಡದ್ರಲ್ಲಿ ಸೇಲ್ ಮಾಡಿಸೋದ್ರಲ್ಲಿ ಬ್ಯುಸಿಯಾಗಿದ್ದ ಸುನೀತಾಗೆ ಮೊನ್ನೆ ಅಂದ್ರೆ ವಾರದ ಹಿಂದೆ ಕರೆಯೊಂದು ಬಂದಿತ್ತು. ಕಾಲ್ ರಿಸೀವ್ ಮಾಡಿ, ಬ್ಯುಸಿನೆಸ್ ಮೀಟಿಂಗ್ ಇದೆ ಅಂತ ತನ್ನ ಕಾರನ್ನ ತೆಗೆದುಕೊಂಡು ಅಭಿರಾಮ್ ಅಪಾರ್ಟ್ಮೆಂಟ್ ನಿಂದ ಹೊರ ಹೋಗಿದ್ದಾಳೆ.
ಕಾರತ್ತಿ ಹೊರ ಹೋದವಳು ರಾತ್ರಿ ಎಷ್ಟೋತ್ತಾದರೂ ಮನೆಗೆ ವಾಪಸ್ಸಾಗಿರ್ಲಿಲ್ಲ. ಮೊಬೈಲ್ ಫೋನ್ ಬೇರೆ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಗಾಬರಿಯಾದ ಸುನೀತ ಚಿಕ್ಕಪ್ಪ ಹಾಗೂ ಆತನ ಮಕ್ಕಳು ಎಲ್ಲಾ ಕಡೆ ಹುಡುಕಾಟ ನಡೆಸಿ, ಕೊನೆಗೆ ಮಲ್ಲೇಶ್ವರಂ ಪೊಲೀಸ್ ಸ್ಟೇಷನ್ ನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ರು. ಇತ್ತ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಮಲ್ಲೇಶ್ವರಂ ಪೊಲೀಸ್ರು ಸುನೀತ ಪತ್ತೆಗೆ ತನಿಖೆ ಕೈಗೊಂಡಿದ್ರು. ಆದ್ರೆ, ಹುಡುಕಾಟ ನಡೆಸ್ತಿದ್ದ ನಾಲ್ಕು ದಿನಗಳ ಬಳಿಕ ವರ್ತೂರು ಸಮೀಪದ ಮುಳ್ಳೂರಿನ ಅಪಾರ್ಟ್ಮೆಂಟ್ ವೊಂದರ ನಾಲ್ಕನೇ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಟ್ರಸ್ಟ್ ಗಳಿಗೆ ನೀಡ್ತಿದ್ದ ಹಣ ಕಂಡು ಕೊಲೆಗೆ ಹಂತಕರ ಪ್ಲಾನ್..??
ಇತ್ತ ಶವಪತ್ತೆಯಾದ ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಧಾವಿಸಿದ್ದ ವರ್ತೂರು ಪೊಲೀಸ್ರು ಸ್ಥಳಪರಿಶೀಲನೆ ಮಾಡಿ, ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡ ಪೊಲೀಸ್ರಿಗೆ ಕೊಲೆಯಾದ ಸುನೀತ ಕೆಲ ಟ್ರಸ್ಟ್ ಗಳಿಗೆ ಆರ್ಥಿಕ ನೆರವು ನೀಡ್ತಿದ್ದಳಂತೆ. ಹೀಗಾಗಿ ಆಕೆಯ ಬಳಿ ಹೆಚ್ಚಾಗಿ ಹಣ ಇರುತ್ತೆ. ಮನೆ ಖರೀದಿ ಸಂಬಂಧ ಪೇಮೆಂಟ್ ಮಾಡಿಸುವ ನೆಪದಲ್ಲಿ ಆಕೆಯಿಂದ ಹಣ ಕಬಳಿಸಬಹುದೆಂದು ಪ್ಲಾನ್ ಮಾಡಿದ್ದ ಹಂತಕರು ಸುನೀತಳನ್ನ ಮೀಟಿಂಗ್ ನೆಪದಲ್ಲಿ ಕರೆಸಿಕೊಂಡ್ ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಸಿಕ್ಕ ಕೆಲವು ಖಚಿತ ಆಧಾರದ ಮೇಲೆ ಹತ್ಯೆ ಕೇಸ್ ನಲ್ಲಿ ಭಾಗಿಯಾಗಿದ್ದ ಇಮ್ರಾನ್ ಹಾಗೂ ವೆಂಕಟೇಶ್ ಎಂಬುವರನ್ನ ಬಂಧಿಸಿರುವ ವರ್ತೂರು ಪೊಲೀಸರು ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿ ಕಿರಣ್ ಕುಮಾರ್ ಎಂಬಾತನ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.