ಮಂಗಳೂರು: ಲೇಡಿಸ್ ಬುರ್ಖಾಗಳಲ್ಲಿನ ಪ್ರೆಸ್ ಬಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಷರ್ ಮಾದರಿಯ ಪದಾರ್ಥಗಳನ್ನು ಪ್ರಯಾಣಿಕರೊಬ್ಬರಿಂದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಆರೋಪಿ ಪ್ರಯಾಣಿಕನಿಂದ ಒಟ್ಟು 5 ಲಕ್ಷ 34 ಸಾವಿರ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶದಿಂದ ಭಾರತಕ್ಕೆ ಬರುವ ಅಕ್ರಮ ಚಿನ್ನ ಸಾಗಾಟಕ್ಕೆ ಕಳ್ಳದಾರಿಗಳು ಹಲವು. ಕಳ್ಳರು ಹಲವು ರೂಪಗಳಲ್ಲಿ ಚಿನ್ನವನ್ನು ಸಾಗಿಸಲು ಯತ್ನಿಸಿದರೂ ಹದ್ದಿನ ಕಣ್ಣುಗಳಿಂದ ಬಚಾವಾಗುವವರು ಕಡಿಮೆ ಎಂಬುವುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದೆ.