ಪುತ್ತೂರು: ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವದ ಅಂಗವಾಗಿ ಎ.28 ರಂದು ದಂಡನಾಯಕ ದೈವದ ವಾಲಸರಿ ನೇಮ ನಡೆಯಿತು.
ಎ.28 ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದು ತಂತ್ರ ತೂಗಿದ ಬಳಿಕ ಶ್ರೀ ದಂಡನಾಯಕ ದೈವದ ವಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ವಾಲಸರಿ ಗದ್ದೆಯಲ್ಲಿ ದೈವದ ನೇಮೋತ್ಸವ ನಡೆಯಿತು.
ಮುಂಜಾನೆಯಿಂದಲೇ ಭಕ್ತರ ದೈವಸ್ಥಾನಕ್ಕೆ ಆಗಮಿಸಿ, ಉಳ್ಳಾಲ್ತಿಗೆ ಪ್ರಿಯವಾದ ಮಲ್ಲಿಗೆ ಹೂವು, ಕುಂಕುಮ, ಪಟ್ಟೆ ಸೀರೆ, ಎಳನೀರು ಅರ್ಪಿಸಿ ಪ್ರಸಾದ ಸ್ವೀಕರಿಸುತ್ತಿದ್ದರು.
ಪುತ್ತೂರಿನಿಂದ 5 ಕಿ.ಮೀ. ದೂರದಲ್ಲಿ ಬಲ್ನಾಡ್ ಎಂಬ ಗ್ರಾಮವಿದ್ದು, ಅಲ್ಲಿ ಕಾರಣೀಕ ಪ್ರಸಿದ್ಧ ಉಳ್ಳಾಲ್ತಿ – ದಂಡನಾಯಕ ದೈವಸ್ಥಾನವಿದೆ. ಇಲ್ಲಿನ ಆರಾಧ್ಯ ದೈವಗಳಾದ ಅಣ್ಣ ದಂಡನಾಯಕ ಮತ್ತು ತಂಗಿ ಉಳ್ಳಾಲ್ತಿಗೆ ವಾರ್ಷಿಕ ನೇಮೋತ್ಸವವು ನಲ್ಕುರಿಯಂತೆ ಪ್ರತೀ ವರ್ಷ ಏಪ್ರಿಲ್ 28ರಂದು ನಡೆಯುತ್ತದೆ. ಆದರೇ ಈ ನೇಮೋತ್ಸವದಲ್ಲಿ ಒಂದು ವಿಶೇಷತೆಯಿದೆ.
ತುಳುನಾಡಿನ ದೈವರಾಧನೆಯಲ್ಲಿ ಅಪರೂಪ ಎನಿಸುವ ವಿಶಿಷ್ಟ ಸಂಪ್ರದಾಯವೊಂದನ್ನು ಇಲ್ಲಿ ಶತಮಾನಗಳಿಂದ ಚಾಚೂ ತಪ್ಪದೇ ಪಾಲಿಸಲಾಗುತ್ತದೆ. ಅದೇನೆಂದರೇ ಈ ನೇಮೋತ್ಸವನ್ನು ಮಹಿಳೆಯರು ವೀಕ್ಷಿಸಬಾರದು ಅದು ಅವರಿಗೆ ನಿಷಿದ್ಧ ಎಂಬ ನಂಬಿಕೆ ಇಲ್ಲಿ ತಲೆ ತಲಾಂತರಗಳಿಂದ ಇದೆ.