ವಿಟ್ಲ: ಆಟೋ ರಿಕ್ಷಾ ಸ್ಕೂಟರ್‌ಗೆ ಡಿಕ್ಕಿಯಾಗಿ ಇಬ್ಬರು ಧರ್ಮಗುರುಗಳು ಗಾಯಗೊಂಡ ಘಟನೆ ಕಂಬಳಬೆಟ್ಟು ಸೇತುವೆ ಬಳಿ ಎ.28 ರಂದು ನಡೆದಿದೆ.
ವಿಟ್ಲದಿಂದ ಕಂಬಳಬೆಟ್ಟು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಪುತ್ತೂರಿನಿಂದ ವಿಟ್ಲಕ್ಕೆ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿದೆ.
ಅಪಘಾತದಿಂದಾಗಿ ಮಹಮ್ಮದ್ ಯಾಸಿನ್ ಕಾಲಿಗೆ ಗಂಭೀರ ಗಾಯವಾಗಿದ್ದು, ಅಬ್ದುಲ್ ರಹಿಮಾನ್ ಎಂಬವರ ಕೈಗೆ ಗಾಯವಾಗಿದೆ.
ಈ ವೇಳೆ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆಟೋ ಚಾಲಕನನ್ನು ಸ್ಥಳೀಯರು ತಡೆದಿದ್ದು, ಗಾಯಾಳುಗಳನ್ನು ಅದೇ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.