ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ನಡೆದ ‘ಶ್ರೀ ರಾಮ ಭಜನಾಮೃತ’ ಕಾರ್ಯಕ್ರಮವೂ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬೆಳಿಗ್ಗೆ ಗಂಟೆ 6.00ಕ್ಕೆ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯ ಬಂಗಾರ ಅರಸರು ದ್ವೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ ಗಂಟೆ 4ರಿಂದ ಕುಣಿತ ಭಜನೆ ನಡೆಯಿತು. ಭಜನಾ ಮಂಗಲೋತ್ಸವ ನಡೆದ ನಂತರ ಸಂಜೆ ಗಂಟೆ 6.30ಕ್ಕೆ ಧರ್ಮಸಭೆ ನಡೆಯಿತು.
ವಿ ಎಚ್ ಪಿ ಧರ್ಮ ಪ್ರಸಾರ ಪ್ರಮುಖ್ ಶ್ರೀಕೃಷ್ಣ ಉಪಾಧ್ಯಾಯರು ದಿಕ್ಸೂಚಿ ಭಾಷಣ ಮಾಡಿದರು. ಮುರಳಿ ಕೃಷ್ಣ ಹಸಂತ್ತಡ್ಕರವರು ಸಂಘಟನೆಯ ಬಗ್ಗೆ ಮಾತನಾಡಿದರು. ವಿ ಎಚ್ ಪಿ ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್, ರಾಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕೃಷ್ಣಯ್ಯ ವಿಟ್ಲ ಅರಮನೆ, ವಿ ಎಚ್ ಪಿ ಪ್ರಖಂಡ ಅಧ್ಯಕ್ಷರಾದ ಪದ್ಮನಾಭ ಕಟ್ಟೆ, ಬಜರಂಗದಳ ಪ್ರಖಂಡ ಸಂಚಾಲಕರಾದ ಚಂದ್ರಹಾಸ್ ಕನ್ಯಾನ ಉಪಸ್ಥಿತರಿದ್ದರು. ಸಭಾ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರಾದ ವಿಠಲ ಶೆಟ್ಟಿ ಅಗರಿ ಬಾಳಿಕೆ ವಹಿಸಿದರು.
ರಾಮೋತ್ಸವ ಸಮಿತಿ ಅಧ್ಯಕ್ಷರಾದ ಚರಣ್ ಕಾಪುಮಜಲು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಹೆಸರಾಂತ ಗಾಯಕ ಕಿಶೋರ್ ಪೆರ್ಲ ವೈಯಕ್ತಿಕ ಗೀತೆ ಹಾಡಿದರು. ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ರಾಮೋತ್ಸವ ಸಮಿತಿ ಕಾರ್ಯದರ್ಶಿ ಮನೋಜ್ ಕಾಶಿಮಠ ರವರು ವಂದನಾರ್ಪಣೆಗೈದರು.ಕಾರ್ಯಕ್ರಮದ ಕೊನೆಗೆ ರಾವಣ ದಹನ ನಡೆಯಿತು. ಪುಟಾಣಿ ಮಕ್ಕಳು ಶ್ರೀ ರಾಮ,ಲಕ್ಷ್ಮಣ, ಸೀತೆ,ಹನುಮಂತನ ವೇಷ ಧರಿಸಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದರು.