ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತ ಕೃಷ್ಣಪ್ರಸಾದ್ (ಚಡ್ಡಿ ಕೃಷ್ಣಣ್ಣ) (67) ಮೇ.17 ರಂದು ನಿಧನರಾದರು.

ಕೃಷ್ಣಪ್ರಸಾದ್ ರವರು ಈ ಮೊದಲು ಬನ್ನೂರಿನಲ್ಲಿ ವಾಸವಾಗಿದ್ದು, ಪ್ರಸ್ತುತ ಸಿಟಿಗುಡ್ಡೆ ವಾಸ್ತವ್ಯ ಹೊಂದಿದ್ದಾರೆ.
ಬನ್ನೂರಿನಲ್ಲಿ ಅಂಗಡಿ ಹೊಂದಿದ್ದ ಕೃಷ್ಣಪ್ರಸಾದ್ ರವರು, ಆರ್. ಎಸ್. ಎಸ್. ನಲ್ಲಿ ತನ್ನನ್ನು ತಾನು ಹೆಚ್ಚು ಸಕ್ರಿಯವಾಗಿ ತೊಡಗಿಸಿ ಕೊಂಡದ್ದರಿಂದ ‘ಚಡ್ಡಿ ಕೃಷ್ಣಣ್ಣ’ ಎಂದೇ ಖ್ಯಾತಿ ಪಡೆದಿದ್ದರು.
ಮೃತರು ಕುಟುಂಬಸ್ಥರು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.