ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 45 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿದ್ದ, ತುಳುನಾಡಿನಲ್ಲಿ ಅತೀ ಹೆಚ್ಚು ನಾಗಪ್ರತಿಷ್ಠೆ ಮಾಡಿದವರೆನ್ನುವ ಕೀರ್ತಿ ಹೊತ್ತ, ಭಾರತದ ಘಟಾನುಘಟಿ ರಾಜಕಾರಣಿಗಳ ಧಾರ್ಮಿಕ ಸಲಹೆಗಾರರಾಗಿದ್ದ ಬ್ರಹ್ಮಶ್ರೀ ವೇದ ಮೂರ್ತಿ ಕೇಶವ ಜೋಗಿತ್ತಾಯ ವಯೋಸಹಜ ಅನಾರೋಗ್ಯದಿಂದ ಮೇ.24ರಂದು ನಿಧನರಾದರು.

45 ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಶವ ಜೋಗಿತ್ತಾಯರು ಅರ್ಚಕರಾಗಿ ಸೇವೆ ಪ್ರಾರಂಭಿಸಿ ಪ್ರಧಾನ ಅರ್ಚಕರಾಗಿ 2016ರಲ್ಲಿ ನಿವೃತ್ತಿ ಹೊಂದಿದರು. ಇವರು ಬೆಳ್ತಂಗಡಿ ತಾಲೂಕಿನ ತನ್ನಿರುಪಂತದ ಬಾಂಗಲಾಯಿ ನಿವಾಸಿಯಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಉದ್ಯಮಿ ಮುತ್ತಪ್ಪ ರೈ ಗಳ ಸಹಿತ ಹಲವು ಘಟಾನುಘಟಿ ನಾಯಕರ ಧಾರ್ಮಿಕ ಸಲಹೆಗಾರರಾಗಿದ್ದ, ಅವರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಜೋಗಿತ್ತಾಯರೇ ವಹಿಸಿಕೊಳ್ಳುತಿದ್ದರು.