ಪುತ್ತೂರು: ಗಾಡಿ ಮಾರಾಟ ದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಘಟನೆಯ ಪರಿಣಾಮ ಇತ್ತಂಡಗಳ ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾದವರನ್ನು ಬುಳೀರಿಕಟ್ಟೆ ನಿವಾಸಿ ಅಲ್ತಾಫ್ ಹಾಗೂ ಬೆಳ್ತಂಗಡಿ ನಿವಾಸಿಗಳಾದ ರಿಜೀಶ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ.
ಗಾಡಿ ಮಾರಾಟ ವಿಚಾರವಾಗಿ ಹಲವು ದಿನಗಳಿಂದ ಇವರ ಮದ್ಯೆ ಮಾತು ಕತೆ ನಡೆಯುತ್ತಿದ್ದು ಇಂದು ಅದು ಮಿತಿ ಮೀರಿ ಜಗಳಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.