ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ “ಸೊರ್ಗದ ಜಾಲ್” ಎಂಬ ತುಳು ಆಲ್ಬಮ್ ಸಾಂಗ್ ನ ಪೋಸ್ಟರ್ ಅನ್ನು ಶ್ರೀಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಯವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

“ಸೊರ್ಗದ ಜಾಲ್” ಎಂಬ ಈ ಹಾಡಿಗೆ ಚೇತನ್ ವರ್ಕಾಡಿ ಸಾಹಿತ್ಯ ಬರೆದಿದ್ದು, ಕ್ಷಿತಿ ಕೆ.ರೈ, ಧರ್ಮಸ್ಥಳ, ರಾಗ ಸಂಯೋಜನೆ ಮತ್ತು ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ಸಂಗೀತ ಅಶ್ವಿನ್ ಪುತ್ತೂರು ನೀಡಿದ್ದಾರೆ.

ಸಮಗ್ರ ನಿರ್ವಹಣೆಯನ್ನು ದಯಾನಂದ ಅಮೀನ್ ಬಾಯಾರ್ ನಿರ್ವಹಿಸಿದ್ದು, ಪ್ರಚಾರ ಕಲೆ ವಾಣಿ ಬಂಗೇರ. ಛಾಯಾಗ್ರಹಣ ಉದಯ್ ಪುತ್ತೂರು ಮತ್ತು ಸಂಕಲನ ಚೇತನ್ ಎಂ ಪುತ್ತೂರು ನಿರ್ವಹಿದ್ದಾರೆ. ಈ ತುಳು ಅಲ್ಬಮ್ ಸಾಂಗ್ ದಯಾ ಕ್ರಿಯೇಷನ್ ಯುಟ್ಯೂಬ್ ಚಾನಲ್ ನಲ್ಲಿ ತೆರೆ ಕಾಣಲಿದೆ.

