ಕುಂದಾಪುರ: ಲವ್ ಮತ್ತು ಸೆಕ್ಸ್ ಜಿಹಾದ್ಗೆ ಬಲಿಯಾದ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎ. ದೇವಾಡಿಗ ಬರೆದ ಪತ್ರವೊಂದು ಇದೀಗ ಪತ್ತೆಯಾಗಿದ್ದು, ತನ್ನ ಮತ್ತು ಅಜೀಜ್ ನಡುವೆ ನಡೆದಿರುವ ಘಟನೆಗಳನ್ನು ಆಕೆ ಕವನ ರೂಪದಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.
ಸುದೀರ್ಘವಾಗಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಕವನದ ರೂಪದಲ್ಲಿರುವ ಪತ್ರ ಇದೀಗ ಪತ್ತೆಯಾಗಿದ್ದು, ಅಜೀಜ್ ಜೊತೆಗಿನ ಪ್ರೇಮದ ಪ್ರತಿ ಅಧ್ಯಾಯವನ್ನೂ ಆಕೆ ಕವನ ರೂಪದಲ್ಲಿ ಚಿತ್ರಿಸಿದ್ದಾಳೆ.

ಕೇವಲ ಬಾಹ್ಯ ಸೌಂದರ್ಯಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ, ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ, ಎಲ್ಲವನ್ನೂ ಮಾಡುತ್ತಾರೆ. ಆದರೆ ನಿಮಗೆ ಐ ಹೇಟ್ ಯು ಅನ್ನುತ್ತಾರೆ ಎಂದೆಲ್ಲ ಅಜೀಜ್ ಮತ್ತು ತನ್ನ ನಡುವೆ ನಡೆದಿರುವ ಘಟನೆಗಳನ್ನು ಕವನ ರೂಪದಲ್ಲಿ ಶಿಲ್ಪಾ ಬರೆದಿದ್ದಾಳೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿಲ್ಪಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಮೇ 25ರಂದು ಮೃತಪಟ್ಟಿದ್ದಳು. ಪ್ರೀತಿಯ ನಾಟಕವಾಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಅಜೀಜ್ ಎಂಬಾತ ಮತ್ತು ಆತನ ಪತ್ನಿಯೇ ಶಿಲ್ಪಾ ಸಾವಿಗೆ ಕಾರಣ ಎಂಬುದಾಗಿ ಶಿಲ್ಪಾ ಕುಟುಂಬಸ್ಥರು ಆರೋಪಿಸಿದ್ದಾರೆ.


























