ನೆಲ್ಯಾಡಿ: ಸಮೀಪದ ಮಣ್ಣಗುಂಡಿ ಎಂಬಲ್ಲಿ ಮೇ. 27 ರಂದು ಸಂಜೆ ನಡೆದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಆಸ್ಪತ್ರಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಕಾರು ಚಾಲಕನನ್ನು ಶಿರಾಡಿ ಸಮೀಪದ ಶಿರೋತ್ತಡ್ಕ ನಿವಾಸಿ ನೆಲ್ಸನ್ (40) ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಸಹಪ್ರಯಾಣಿಕ ಪಿಲ್ಲಿಕ್ಸ್ ಅಬ್ರಾಹಂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿತ್ತು. ನೆಲ್ಯಾಡಿಯಿಂದ ಶಿರಾಡಿ ಕಡೆ ಹೋಗುತ್ತಿದ್ದ ಮಾರುತಿ ಇಕೋ ಕಾರು ಮಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿರುವ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿಯಾಗಿತ್ತು.

























