ಮಂಗಳೂರು: ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಎಸ್.ಡಿ.ಪಿ.ಐ ವತಿಯಿಂದ ನಡೆದ ಬೃಹತ್ ಜನಾಧಿಕಾರ ಸಮಾವೇಶಕ್ಕೂ ಮುನ್ನ ನಡೆದಿದೆ ಎನ್ನಲಾಗಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದೆರಡು ಬೈಕ್ ಗಳಲ್ಲಿ ಎಸ್.ಡಿ.ಪಿ.ಐ ಬಾವುಟ ಹಿಡಿದ ಮುಸ್ಲಿಂ ಯುವಕರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ಅವಾಚ್ಯವಾಗಿ ನಿಂದಿಸುತ್ತಾ ಪ್ರಯಾಣಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಮೊದಲಿಗೆ ಆರ್.ಎಸ್.ಎಸ್ ನ ಬಗ್ಗೆ ಅವಾಚ್ಯ ಶಬ್ದ ಬಳಸಿ ಘೋಷಣೆ ಕೂಗಿದ್ದಲ್ಲದೇ, ಪೋಡ ಪುಲ್ಲೆ ಪೊಲೀಸ್, ನಾಯಿಂಡೆ ಮೋನೆ ಪೊಲೀಸ್ ಎಂದೆಲ್ಲ ಅವಾಚ್ಯವಾಗಿ ನಿಂದಿಸುತ್ತಿರುವುದು ಕಂಡುಬಂದಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾನೂನು ರಕ್ಷಣೆ ಮಾಡುವ ಪೊಲೀಸರ ಬಗ್ಗೆ ಈ ರೀತಿಯ ಶಬ್ದಗಳನ್ನು ಬಳಸಿ ಅವರಿಗೆ ಅವಮಾನ ಮಾಡಿರುವುದು ಖಂಡನೀಯ ಹಾಗೆಯೇ ಈ ರೀತಿ ಅನುಚಿತವಾಗಿ ವರ್ತಿಸಿದ ಯುವಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..


























