ಪುತ್ತೂರು: ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದ ಬಡಗನ್ನೂರು ಪಟ್ಟೆ ರಾಮ ಪಾಟಾಳಿ ಯವರ ಪುತ್ರ ದಯಾನಂದ(ಮಲ್ಲಿಶ)(40) ರವರು ಮೇ.28 ರಂದು ನಿಧನರಾದರು.

ದಯಾನಂದ ರವರು ಬೆನ್ನುಮೂಲೆ ಮುರಿತಕ್ಕೊಳಗಾಗಿ ಸುಮಾರು 16 ವರ್ಷಗಳಿಂದ ಮಲಗಿದ್ದಲ್ಲೇ ಇದ್ದು, ಅವರ ತಾಯಿಯೇ ಅವರನ್ನು ನೋಡಿಕೊಳ್ಳುತ್ತಿದ್ದರು.
ದಯಾನಂದ್ ರವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರು ಕಣ್ಣುಗಳನ್ನು ತೆಗೆದು ಕೊಂಡೊಯ್ಯಿದಿದ್ದಾರೆ ಎಂದು ತಿಳಿದು ಬಂದಿದೆ.

ಕಣ್ಣುಗಳನ್ನು ದಾನ ಮಾಡಬೇಕೆಂಬುದು ದಯಾನಂದ್ ರವರ ಆಶಯವಾಗಿದ್ದು, ಕುಟುಂಬಸ್ಥರಲ್ಲಿ ಈ ಬಗ್ಗೆ ಹೇಳಿದ್ದರು ಎನ್ನಲಾಗಿದೆ. ತನ್ನ ಸಾವಿನ ನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂಬ ದಯಾನಂದ್ ರವರ ಆಶಯಕ್ಕೆ ಸಾರ್ವಜನಿಕ ವಲಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿಯೂ ಹಲವು ವರ್ಷಗಳ ನಂತರದಲ್ಲಿ ಇದೇ ಮೊದಲ ಬಾರಿ ಕಣ್ಣುದಾನ ಮಾಡುವಂತಹ ಕಾರ್ಯ ನಡೆದಿದ್ದು, ಸಾವಿನಲ್ಲಿಯೂ ದಯಾನಂದ್ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದು ವೈದ್ಯರು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

























