ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಬಳಿಯ ಬನತ್ತಕೋಡಿ ಎಂಬಲ್ಲಿ ಬಚ್ಚಲು ಕೋಣೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.

ಲೀಲಾವತಿ ಎಂಬವರ ಮನೆಯ ಬಚ್ಚಲು ಕೋಣೆಗೆ ನುಗ್ಗಿದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪುತ್ತೂರಿನ ತೇಜಸ್ ಮತ್ತು ಪುನೀತ್ ರವರು ರಕ್ಷಣೆ ಮಾಡಿದ್ದು, ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.






























