ಕಠ್ಮಂಡು: 22 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ ಎಂದು ವಿಮಾನಯಾನ ಮತ್ತು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಯ ಅನ್ವಯ ಪೋಖರಾದಿಂದ ಜೋಮ್ಸಮ್‌ಗೆ ಪ್ರಯಾಣ ಬೆಳೆಸಿದ್ದ ತಾರಾ ಏರ್ 9 NAET ಡಬಲ್-ಎಂಜಿನ್ ವಿಮಾನ ಬೆಳಗ್ಗೆ 9:55ರ ವೇಳೆ ಮಾರ್ಗ ಮಧ್ಯೆ ಸಂಪರ್ಕ ಕಳೆದುಕೊಂಡಿದೆ.
ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ಸೋಮ್‌ನ ಆಕಾಶದ ಮೇಲೆ ಕಾಣಿಸಿಕೊಂಡಿತು ಮತ್ತು ನಂತರ ಮೌಂಟ್ ಧೌಲಗಿರಿಗೆ ತಿರುಗಿತು, ನಂತರ ಅದು ಸಂಪರ್ಕಕ್ಕೆ ಬರಲಿಲ್ಲ ಎಂದು ಮುಖ್ಯ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ಹೇಳಿದ್ದಾರೆ. ವಿಮಾನದಲ್ಲಿ ಭಾರತದ ನಾಲ್ವರು, ಜಪಾನ್ನ ಮೂರು ಪ್ರಜೆಗಳು ಸೇರಿ 22 ಪ್ರಯಾಣಿಕರಿದ್ದರು. ತಾರಾ ಏರ್ ನೇಪಾಳದಾದ್ಯಂತ ಅನೇಕ ದೂರದ ಸ್ಥಳಗಳಿಗೆ ಸೇವೆಗಳನ್ನು ಒದಗಿಸುತ್ತದೆ


























