ಪುತ್ತೂರು: ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪುತ್ತೂರಿನ ಖ್ಯಾತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ 10 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ‘ರಜೆಯ ವಿಹಾರ – ಚಿಣ್ಣರ ವಿಚಾರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ತಮ್ಮ ಬೇಸಿಗೆ ರಜೆಯನ್ನು ಹೇಗೆ ಕಳೆದರು ಎಂಬುದರ ಬಗ್ಗೆ
ಕನ್ನಡದಲ್ಲಿ ಪ್ರಬಂಧಗಳನ್ನು ಬರೆದು 9353030916 ಗೆ ಮೇ 31
ರ ಒಳಗೆ ಕಳುಹಿಸಿಕೊಡಬೇಕು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಖ್ಯೆಗೆ ವಾಟ್ಸಪ್
ಮೂಲಕ ಸಂಪರ್ಕಿಸಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯ ನಿಬಂಧನೆಗಳು ಹೀಗಿವೆ :
- ಪ್ರಬಂಧವು 1509 ಪದಗಳ ಒಳಗಿರಬೇಕು.
- ಪ್ರಬಂಧವನ್ನು ಪೆನ್ನಿನಿಂದ ಬಿಳಿ ಹಾಳೆಯ ಮೇಲೆ
- ಬರೆಯಬೇಕು.
- ಸ್ಪರ್ಧಿಯು ತಮ್ಮ ಹೆಸರು, ತರಗತಿ ಮತ್ತು ಶಾಳೆಯ
- ಹೆಸರನ್ನು ಕಾಗದದ ಮೇಲಿನ ಬಲ ತುದಿಯಲ್ಲಿ ಬರೆಯಬೇಕು.
- ಸ್ಪರ್ಧಿಯು ಪ್ರಬಂಧವನ್ನು ಮತ್ತು ಶಾಲಾ ಗುರುತಿನ ಚೀಟಿಯ ಸ್ಪಷ್ಟ ಛಾಯಾಚಿತ್ರವನ್ನು ಮೇಲೆ ಸೂಚಿಸಿದ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.
- ತೀರ್ಪುಗಾರರು ಸ್ಪರ್ಧಿಯ ಪ್ರಬಂಧವನ್ನು ಅದರ ವಾಕ್ಯ ರಚನೆ ಮತ್ತು ಸೃಜನಶೀಲತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ.
- ಚಿನ್ನರು ಕೂಡಲೇ ಸೂಚಿಸಿದ ವಿಷಯದಲ್ಲಿ ಪ್ರಬಂಧವನ್ನು ಬರೆದ ಕಳುಹಿಸಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶವನ್ನು ಪಡೆದುಕೊಳ್ಳಬಹುದು. ಜತೆಗೆ ಬಹುಮಾನ ಗೆಲ್ಲುವ ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಬಹುದು.

























