ವಿಟ್ಲ: ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಇದರ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ದಿಗಂತ್ ಮಂಜಲಾಡಿ ಒಕ್ಕೆತ್ತೂರು ರವರಿಗೆ ಚಿಕಿತ್ಸೆಗಾಗಿ 25500 ರೂ. ಸಹಾಯ ಹಸ್ತ ನೀಡಲಾಯಿತು.

ಈ ವೇಳೆ ಹಿರಿಯರಾದ ಕೃಷ್ಣಪ್ಪಗೌಡ ಕಾಮಟ , ಕರುಣಾಕರ ನಾಯ್ತೊಟ್ಟು ಪಟ್ಟಣ ಪಂಚಾಯಿತಿ ಸದಸ್ಯರು, ಉದಯ ಕುಮಾರ್ ನಾಯ್ತೊಟ್ಟು ನಿರ್ದೇಶಕರು ವ್ಯವಸಾಯ ಸೇವಾ ಸಹಕಾರಿ ಸಂಘ ವಿಟ್ಲ, ಕೃಷ್ಣಪ್ಪ ಕುಲಾಲ್, ವಿಶ್ವನಾಥ್ ನಾಯ್ತೊಟ್ಟು ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ವಿಟ್ಲ ಘಟಕ, ತ್ರಿಶುಲ್ ಫ್ರೆಂಡ್ಸ್ ಅಧ್ಯಕ್ಷರಾದ ಪ್ರಶಾಂತ್, ದಯಾನಂದ ಬೊಡ್ಡೋಣಿ, ಪ್ರವೀಣ್ ನಡುವಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.




























