ಮಂಗಳೂರು: ವಾಯ್ಸ್ ಆಫ್ ಆರಾಧನ ಮೂಡಬಿದ್ರೆ ಶ್ರೀ ಕೃಷ್ಣ ಯುವಕ ಮಂಡಲ ರಿ. ಸಿಟಿ ಗುಡ್ಡೆ ಇದರ ಜಂಟಿ ಆಶ್ರಯದಲ್ಲಿ 51ನೇ ಸನ್ಮಾನವನ್ನು ಮಂಗಳೂರಿನ ಕುಲಶೇಖರದಲ್ಲಿ ತುಳುನಾಡಿನ ಶ್ರೇಯ ಘೋಷಲ್ ಖ್ಯಾತಿಯ ಬಹುಮುಖ ಪ್ರತಿಭೆ ಸಹನಾ ದೇವಾಡಿಗ ರವರನ್ನು ಅವರ ಲೈವ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

50ನೇ ಸನ್ಮಾನ ಕಾರ್ಯಕ್ರಮದ ಹುಟ್ಟುಹಬ್ಬವನ್ನು ವಾಯ್ಸ್ ಅಫ್ ಆರಾಧನ ಇದರ ಸದಸ್ಯ ನವೀನ್ ಪುತ್ತೂರು, ಶ್ರೀ ಕೃಷ್ಣ ಯುವಕ ಮಂಡಲ ಇದರ ಅಧ್ಯಕ್ಷರಾದ ರಾಜೀವ್ ಗೌಡ ಹಾಗೂ ಸಹನಾ ದೇವಾಡಿಗ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿ ರಂಗಭೂಮಿ ಕಲಾವಿದ ಚಲನಚಿತ್ರ ನಟ ಜೆಪಿ ಸಂತೋಷ್ ಮುರ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾರನಾಥ ದೇವಾಡಿಗ, ವಾರಿಜಾಕ್ಷಿ ಗಾಯಕರಾದ ಜಗದೀಶ ಸಜೀಪ, ಶಿವ ಹಾವೇರಿ ಉಪಸ್ಥಿತರಿದ್ದರು. ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸ್ನೇಹ ಸಿಲ್ಕ್ ರೆಡಿಮೇಡ್ ಬೊಳುವಾರು ಇದರ ಉದ್ಯೋಗಿ ಶ್ರೀಕೃಷ್ಣ ಯುವಕ ಮಂಡಲ ಸಿಟಿ ಗುಡ್ಡ ಇದರ ಅಧ್ಯಕ್ಷರಾದ ರಾಜೀವ ಗೌಡ ರವರು ಸನ್ಮಾನ ಪತ್ರವನ್ನು ಓದಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.
























