ಬಂಟ್ವಾಳ: ಕೆಲ ದಿನಗಳ ಹಿಂದಷ್ಟೇ ನಿಧನರಾದ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾ ಸಾಧಕ ಉದಯ ಚೌಟ ಬದಿಗುಡ್ಡೆ ರವರಿಗೆ ಹುಟ್ಟೂರ ಶ್ರದ್ದಾಂಜಲಿ ಕಾರ್ಯಕ್ರಮವೂ ಮೇ.31 ರಂದು ಮಾಣಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಲಿದೆ.
ಉದಯ್ ಚೌಟ ರವರು ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾಗಿದ್ದು, ಮೇ.21 ರಂದು ಅನಾರೋಗ್ಯದಿಂದಾಗಿ ಹಠಾತ್ ನಿಧನರಾದರು.
ಉದಯ್ ಚೌಟ ರವರು 2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ತಂಡದಲ್ಲಿ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ಪಡೆದಿದ್ದರು.

























