ಪುತ್ತೂರು : ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ 2021-22ರ ಸಾಲಿನ ಅಧ್ಯಕ್ಷರಾಗಿ ಅಶೋಕ್ ನಾಯ್ಕ ಕೆದಿಲ, ಸಂಚಾಲಕರಾಗಿ ಶ್ರೀಧರ ನಾಯ್ಕ ಮುಂಡೋವು ಮೂಲೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಲತಾ ಪುಣಚ ಮಲ್ಲಿಪ್ಪಾಡಿಯವರು ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ್ ಮೆಸ್ಕಾಂ ಮಂಗಳೂರು, ಜೊತೆ ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಅಡ್ಯನಡ್ಕ ಬಂಟ್ವಾಳ, ಕೋಶಾಧಿಕಾರಿಯಾಗಿ ಸುಚೇತ ಪೆರುವಾಯಿ ಬಂಟ್ವಾಳ, ಕ್ರೀಡಾ ಸಂಚಾಲಕರಾಗಿ ಸುಧೀರ್ ಆರ್ಯಾಪು, ಸಾಂಸ್ಕೃತಿಕ ಸಂಚಾಲಕರಾಗಿ ದೇವಕಿ ಎಲಿಮಲೆ ಸುಳ್ಯ, ಲೆಕ್ಕ ಪರಿಶೋಧಕರಾಗಿ ಕುಶಾಲಪ್ಪ ನಾಯ್ಕ ಮೆಸ್ಕಾಂ ಮಂಗಳೂರು, ಮರಾಟಿ ಸಂವಾದ ಸಂಚಾಲಕರಾಗಿ ಆನಂದ ನಾಯ್ಕ ಮಂಜಲ್ಪಡ್ಪು, ನೆರವು ಸಂಚಾಲಕರಾಗಿ ಆನಂದ್ ನಾಯ್ಕ ಪಣಂಬೂರು ಮಂಗಳೂರು,ರಕ್ತ ನಿಧಿ ಸಂಚಾಲಕರಾಗಿ ವಿನಯ ನಾಯ್ಕ ಆರ್ಯಾಪು.
ಉದ್ಯೋಗ ಸಂಚಾಲಕರಾಗಿ ಅಮಿತ ಕೆ. ಬಿ ಕಡಬ, ವಧು ವರರ ಸಮಿತಿ ಸಂಚಾಲಕರಾಗಿ ವಿಜಯಲಕ್ಷ್ಮಿ ಪೆರುವಾಯಿ, ಪ್ರವಾಸ ಸಂಚಾಲಕರಾಗಿ ಆನಂದ ನಾಯ್ಕ ಪೆರುವಾಯಿ, ಸ್ವಚ್ಛತೆ ಮತ್ತು ಶ್ರಮದಾನ ಸಂಚಾಲಕರರಾಗಿ ಸಾವಿತ್ರಿ ಉಮೇಶ್ ಕೃಷ್ಣನಗರ, ಆರೋಗ್ಯ ಮತ್ತು ವೈದ್ಯಕೀಯ ಸಂಚಾಲಕರಾಗಿ ವಸಂತಿ ಚನಿಲ ಬಲ್ನಾಡು, ಶಿಕ್ಷಣ ಸಂಚಾಲಕರಾಗಿ ಜ್ಯೋತಿ ನಾಯ್ಕ ಕೆದಿಲ, ಪ್ರಚಾರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಸಂಚಾಲಕರಾಗಿ ಲೋಕೇಶ್ ಆರ್ಯಾಪು, ಸಂಘಟನಾ ಕಾರ್ಯದರ್ಶಿಗಳಾಗಿ ಸದಾಶಿವ ನಾಯ್ಕ ಮೆಸ್ಕಾಂ ಪುತ್ತೂರು, ವಿಮಲಾ ನಾಯ್ಕ ದೈತೋಟ ಪಾಣಾಜೆ, ಬಾಲಕೃಷ್ಣ ಮರ್ದಾಳ, ತಿರುಮಲೇಶ್ ಪೆರುವಾಯಿ, ಬಾಲಕೃಷ್ಣ ನಿಡ್ಪಳ್ಳಿ, ಕರುಣಾಕರ ಮುಂಡೋವುಮೂಲೆ, ಲಕ್ಷ್ಮೀ ನಾರಾಯಣ ಸುಬ್ರಹ್ಮಣ್ಯ ಕಡಬ, ಗೀತಾ ಪಾಣಾಜೆ, ರವೀಂದ್ರ ನಾಯ್ಕ ಅಡ್ಯನಡ್ಕ,ಚಂದ್ರಾವತಿ ಉದಯ ನಾಯ್ಕ ಮಂಗಳೂರು, ವೀಣಾ ಸೇಡಿಯಾಪು, ಬಾಲಕೃಷ್ಣ ಬೊಮ್ಮರು ಸುಳ್ಯ, ರೋಹಿತ್ ವಿಟ್ಲ, ಪ್ರಮೀಳಾ ಕೆದಿಲ, ಯಶವಂತ ಮುಂಡೆಕೋಲು, ಅಣ್ಣು ನಾಯ್ಕಕುಂಬ್ರ, ಪದ್ಮಾವತಿ ಪೆರಾಜೆ, ಗಂಗಾಧರ ಪಾಣೆಮಂಗಳೂರು, ಪ್ರಸನ್ನ ನಾಯ್ಕ ಕೊಕ್ಕಡ, ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಚಾಲಕ ಶ್ರೀಧರ್ ನಾಯ್ಕ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ವಿಮಲಾ ದೈತೋಟ ವಂದಿಸಿದರು.