ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಕೊರೊನಾ ಸೋಂಕುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಮುಂಬರುವ ಹಬ್ಬಗಳನ್ನು ಸಾರ್ವಜನಿಕ ವಾಗಿ ಆಚರಿಸುವಾಗ ಸ್ಥಳೀಯ ನಿರ್ಬಂಧಗಳನ್ನು ಹೇರುವ ಬಗ್ಗೆ ಕೇಂದ್ರ ಗಂಭೀರ ಹೆಜ್ಜೆಗಳನ್ನು ಇಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಮೂಹಿಕ ಸಭೆಗಳನ್ನು ಸೀಮಿತಗೊಳಿಸಲು ಮತ್ತು ಅಗತ್ಯ ಬಿದ್ದರೆ ನಿರ್ಬಂಧಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ ನೀಡಿದೆ.
ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಾಧಿಕಾರಿಗಳಿಗೆ ಪತ್ರ ಬರೆದಿದ್ದು, ಇದೇ ವೇಳೆ ಅವರು ಪತ್ರದಲ್ಲಿ ಕರೋನ ವಿರುದ್ಧದ ಹೋರಾಟವು ಗಂಭೀರ ಸ್ಥಿತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಪ್ರಕರಣಗಳು ಮತ್ತು ಸಾವುಗಳು ವರದಿಯಾಗುತ್ತಿರುವುದರಿಂದ, ಕೋವಿಡ್-19 ವಿರುದ್ಧ ಹೋರಾಟವು ನಿರ್ಣಾಯಕ ಹಂತದಲ್ಲಿವೆ ಎಂದು ಹೇಳಿದ್ದಾರೆ.
ಮುಂದಿನ ದಿನದಲ್ಲಿ ಹೋಳಿ, ಶಬ್-ಎ-ಬಾರತ್, ಬಿಹು, ಈಸ್ಟರ್ ಮತ್ತು ಈದ್-ಉಲ್-ಫಿತರ್ ಮುಂತಾದ ಹಬ್ಬಗಳ ಹಿನ್ನೆಲೆಯಲ್ಲಿ, ರಾಜ್ಯಗಳು ಈ ಹಬ್ಬಗಳ ಸಾರ್ವಜನಿಕ ಆಚರಣೆಗಳಲ್ಲಿ ಸ್ಥಳೀಯ ನಿರ್ಬಂಧಗಳನ್ನು ಹೇರುವುದು ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 22 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು ಸಾಮೂಹಿಕ ಸಭೆಗಳನ್ನು ಮಿತಿಗೊಳಿಸಿ / ದೂರವಿಡಿ ಅಂತ ಹೇಳಿದ್ದಾರೆ.