ನವದೆಹಲಿ: ಯುವತಿಯೋರ್ವಳು ತನ್ನ ಪ್ರಿಯಕರನೊಂದಿಗೆ ವಿವಾಹವಾಗಲು ಬಾಂಗ್ಲದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬಂದಿರುವ ಘಟನೆ ನಡೆದಿದೆ.
ಬಾಂಗ್ಲಾದೇಶ ಮೂಲದ ಕೃಷ್ಣ ಮಂಡಲ್ ಹಾಗೂ ಭಾರತ ಮೂಲದ ಅಭಿಕ್ ಮಂಡಲ್ ನಡುವೆ ಪ್ರೇಮ ಹುಟ್ಟಿತ್ತು. ಫೇಸ್ಬುಕ್ನಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದೇ ಪ್ರೀತಿ ಅಂತರಾಷ್ಟ್ರೀಯ ಗಡಿ ರೇಖೆ ದಾಟಿಸುವಂತೆ ಮಾಡಿದೆ. ಕೃಷ್ಣ ಮಂಡಲ್ ಬಳಿ ಪಾಸ್ಪೋರ್ಟ್ ಇಲ್ಲದ ಕಾರಣ ಬಾಂಗ್ಲಾದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬರುವ ಪ್ಲಾನ್ ಮಾಡಿದ್ಲು.

ಬಾಂಗ್ಲಾದೇಶದ ಡೇಂಜರಸ್ ಆಗಿರೋ ಹುಲಿಗಳ ಕಾಡು ಅಂತಲೇ ಕರೆಯಲ್ಪಡುವ ಸುಂದರ್ಬನ್ಸ್ ಕಾಡನ್ನ ದಾಟಿದ್ದಾಳೆ. ಅಲ್ಲದೆ ಮಟ್ಲಾದ ನದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಈಜಿ ಪ್ರಿಯತಮೆ ಕೃಷ್ಣ ಗಡಿ ದಾಟಿದ್ದಾಳೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಇವರಿಬ್ಬರ ಮದುವೆ ಕೂಡ ನಡೀತು. ಆದ್ರೆ ಅಕ್ರಮ ಗಡಿ ಪ್ರವೇಶದ ಕಾರಣ ಬಂಗಾಳದ ನರೇಂದ್ರಪುರ ಠಾಣಾ ಪೊಲೀಸರು ಕೃಷ್ಣಳನ್ನ ವಶಕ್ಕೆ ಪಡೆದಿದ್ರು. ಮೂಲಗಳ ಮಾಹಿತಿಯ ಅನ್ವಯ, ನಂತರ ಬಾಂಗ್ಲಾದೇಶದ ಕಮಿಷನರ್ಗೆ ಕೃಷ್ಣಳನ್ನ ಹಸ್ತಾಂತರಿಸಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿದ್ದ ಈ ಘಟನೆ ಈಗ ಬೆಳಕಿಗೆ ಬಂದಿದೆ. ಏನೇ ಆದ್ರೂ ಪ್ರೀತಿಗಾಗಿ ದೇಶದ ಗಡಿಯನ್ನೇ ದಾಟಿ ಬಂದ ಕೃಷ್ಣಳಿಂದ ಪ್ರೀಯತಮ ದೂರವಾಗಿದ್ದಾನೆ. ಅಕ್ರಮ ಗಡಿ ಪ್ರವೇಶ ಪ್ರೇಮಿಗಳನ್ನ ದೂರ ಮಾಡಿದೆ.
ಕೆಲ ತಿಂಗಳ ಹಿಂದೆ ಕೂಡ ಬಾಂಗ್ಲಾದೇಶದ ಯುವಕನೊಬ್ಬ ತನ್ನ ಫೇವರೆಟ್ ಚಾಕೊಲೇಟ್ ಖರೀದಿಸಲು ಗಡಿಯಲ್ಲಿ ನದಿಯನ್ನು ಈಜಿ ಭಾರತಕ್ಕೆ ಬಂದಿದ್ದ. ಯುವಕ ಪೊಲೀಸರಿಗೆ ಸಿಕ್ಕ ಬಳಿಕ ಅಕ್ರಮವಾಗಿ ದೇಶ ಪ್ರವೇಶ ಮಾಡಿದಕ್ಕೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮರಳಿ ಬಾಂಗ್ಲಾ ಹೈಕಮಿಷನ್ಗೆ ಹಸ್ತಾಂತರ ಮಾಡಲಾಗಿತ್ತು.


























