ಪುತ್ತೂರು: ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲೆ ನೆಲ್ಲಿಕಟ್ಟೆ ಇಲ್ಲಿ ನಡೆದ ‘ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ’ ದಲ್ಲಿ ಸುದಾನ ವಸತಿಯುತ ಶಾಲೆ ಪುತ್ತೂರು ಇಲ್ಲಿನ ೬ನೇ ತರಗತಿಯ ವಿದ್ಯಾರ್ಥಿಗಳಾದ ಅನಿಖಾ ಯು ಮತ್ತು ಇಶಾನ್ವಿಯವರ ತಂಡ ಪ್ರಸ್ತುತ ಪಡಿಸಿದ SPEED CONTROLLING UNIT ಎಂಬ ಯೋಜನೆಯು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಸುದಾನ ವಸತಿಯುತ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ರಂಜಿತಾ, ಪುಷ್ಪಶ್ರೀ ಹಾಗೂ ನಿವೇದಿತಾರವರು ಮಾರ್ಗದರ್ಶನ ನೀಡಿರುತ್ತಾರೆ. ಅನಿಖಾ ಯು ಇವರು ಉದಯ ಕುಮಾರ್ ಪಿ ಮತ್ತು ಸೀಮಾ ಎಸ್ ರಾವ್ ಇವರ ಪುತ್ರಿಯಾಗಿರುತ್ತಾರೆ ಹಾಗೂ ಇಶಾನ್ವಿ ಪಿ ಇವರು ಪ್ರದೀಪ್ ಮತ್ತು ಯೋಗಿತಾ ಪ್ರದೀಪ್ ಇವರ ಪುತ್ರಿಯಾಗಿರುತ್ತಾರೆ. ರಾಜ್ಯಮಟ್ಟದ ಸ್ಪರ್ಧೆಯು ಏಪ್ರಿಲ್ ೨೦ರ ನಂತರ ಬನ್ನೇರುಘಟ್ಟ ಬೆಂಗಳೂರು ಇಲ್ಲಿ ನಡೆಯಲಿರುವುದು. ಸುದಾನ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ