ಕೊಚ್ಚಿ: ಕೇರಳದಲ್ಲೊಂದು ಅಪರೂಪ ಘಟನೆ ಬೆಳಕಿಗೆ ಬಂದಿದೆ. ಪರಸ್ಪರ ಇಷ್ಟಪಟ್ಟಿದ್ದ ಸ್ವಲಿಂಗಿ ಜೋಡಿಯನ್ನು ಮನೆಯವರು ವಿರೋಧಿಸಿದರೂ, ಕೇರಳ ಹೈಕೋರ್ಟ್ ಇವರನ್ನು ಒಂದುಗೂಡಿಸಿದೆ. ಕಾನೂನಿನ ಪ್ರಕಾರ ಒಂದಾಗಿ ಜೀವಿಸಲು ಕೋರ್ಟ್ ಅನುಮತಿ ನೀಡಿದೆ.
ಕಳೆದ ವಾರ ತನ್ನ ಸಂಗಾತಿ ಫಾತಿಮಾಳನ್ನು ಆಕೆಯ ಸಂಬಂಧಿಕರು ಅಪಹರಿಸಿದ್ದಾರೆ ಎಂದು ಅಧಿಲಾ ಆರೋಪಿಸಿದ್ದಾರೆ. ಈ ಹಿಂದೆಯೂ ಆಕೆ ಪೊಲೀಸರಿಗೆ ದೂರು ನೀಡಿದ್ದಳು.
ಅಧಿಲಾ (22) ಮತ್ತು ಫಾತಿಮಾ (23) ಅವರು ಸೌದಿ ಅರೇಬಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ಭೇಟಿಯಾಗಿದ್ದರು. ನಂತರ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಯ ಪ್ರಕಾರ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಆದರೆ ಸಂಬಂಧಿಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಮನೆಯವರಿಂದ ತೀವ್ರ ವಿರೋಧ
“ಮೇ 19 ರಂದು ನಾನು ಕೋಝಿಕ್ಕೋಡ್ ತಲುಪಿ ಫಾತಿಮಾಳನ್ನು ಭೇಟಿಯಾದೆ. ಕೆಲವು ದಿನಗಳಿಂದ ನಾವು ಕೋಝಿಕ್ಕೋಡ್‌ನ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದೆವು, ಆದರೆ ಸಂಬಂಧಿಕರು ಸ್ಥಳದಲ್ಲಿ ಅವರನ್ನು ಪತ್ತೆಹಚ್ಚಿದಾಗ ಪೊಲೀಸರು ಮಧ್ಯಪ್ರವೇಶಿಸಿದರು” ಎಂದು ಅಧಿಲಾ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಧಿಲಾ ಅವರ ಸಂಬಂಧಿಕರು ದಂಪತಿಯನ್ನು ಕೋಝಿಕ್ಕೋಡ್‌ನಿಂದ ಅಲುವಾಕ್ಕೆ ಕರೆದೊಯ್ದರು. ಕೆಲವು ದಿನಗಳ ನಂತರ ಫಾತಿಮಾ ಅವರ ಸಂಬಂಧಿಕರು ಅಲುವಾಕ್ಕೆ ಆಗಮಿಸಿ ಅವಳನ್ನು ಕೋಝಿಕ್ಕೋಡ್‌ಗೆ ಬಲವಂತವಾಗಿ ಕರೆದೊಯ್ದರು. ಕೋಝಿಕ್ಕೋಡ್ ಮೂಲದ ಎನ್‌ಜಿಒ ವನಜಾ ಕಲೆಕ್ಟಿವ್‌ನ ಬೆಂಬಲದೊಂದಿಗೆ ದಂಪತಿಗಳು ಕೋಝಿಕ್ಕೋಡ್‌ನಲ್ಲಿ ವಾಸಿಸುತ್ತಿದ್ದರು. ಈಗ ಕೋರ್ಟ್ ಕೂಡಾ ಈ ಜೋಡಿಗೆ ಒಟ್ಟಿಗೆ ವಾಸಿಸುವ ಅನುಮತಿ ನೀಡಿದ್ದು ಈ ಜೋಡಿ ಮತ್ತೆ ಒಂದಾಗಿದ್ದಾರೆ.
ಕೇರಳ ಮೂಲದ ಲೆಸ್ಬಿಯನ್ ದಂಪತಿಗಳಾದ ಆದಿಲಾ ನಜ್ರಿನ್ ಮತ್ತು ಫಾತಿಮಾ ನೂರಾ ಅವರು ಮೇ 31 ಮಂಗಳವಾರದಂದು ಕೇರಳ ಹೈಕೋರ್ಟ್ ಒಟ್ಟಿಗೆ ವಾಸಿಸಲು ಅವಕಾಶ ನೀಡಿದಾಗ ಅವರಿಗೆ ಸ್ವಲ್ಪ ಕಾಲಾವಕಾಶ ಸಿಕ್ಕಿತು. ನೂರಾಳನ್ನು ಆಕೆಯ ಮನೆಯವರೇ ಅಪಹರಿಸಿದ್ದಾರೆ ಎಂದು ಆರೋಪಿಸಿ ನಜ್ರಿನ್ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಪಾಲಿಗೆ ಅಗ್ನಿಪರೀಕ್ಷೆ ಮುಗಿದಂತೆ ಕಾಣುತ್ತಿಲ್ಲ.



























