ಮಡಿಕೇರಿ: ಹೊರವಲಯದ ಕಮಾನುಗೇಟ್ ಬಳಿ ಯುವತಿ ಕಿಡ್ನ್ಯಾಪ್ ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ನಗರದಲ್ಲಿ ಯುವತಿ ಕಿಡ್ನ್ಯಾಪ್ ವದಂತಿ ಆತಂಕ ಸೃಷ್ಟಿಸಿದೆ..? ಅಂಗಡಿ ಬಳಿ ಯುವತಿ ಏಕಾಂಗಿಯಾಗಿ ನಿಂತಿದ್ದಾಗ ಕಾರಿನಲ್ಲಿ ಬಂದು ಯುವತಿಯನ್ನ ಕೆಲ ಯುವಕರು ಎಳೆದೊಯ್ದಿದ್ದಾರೆ. ಈ ಕುರಿತು ಮಡಿಕೇರಿ ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಡಿಕೇರಿ ನಗರ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ ಯುವತಿ 500ರೂ ಗೂಗಲ್ ಪೇ ಮಾಡಿ ಕ್ಯಾಷ್ ಪಡೆದಿದ್ದಳು. ಅದೇ ವೇಳೆ ಆಗಮಿಸಿದ ಇನ್ನೋವಾ ಕಾರು ನಿಂತಿದ್ದ ಯುವತಿಯೊಬ್ಬಳನ್ನು ಮೂವರು ಯುವಕರು ಇನ್ನೋವಾ ಕಾರಿಗೆ ಬಲವಂತದಿಂದ ಎಳೆದು ಹಾಕಿಕೊಂಡು ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳೀಯರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಂಗಡಿ ಸಿಬ್ಬಂದಿ ರೆಹಮಾನ್ ಎಂಬುವವರು ಪೊಲೀಸರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೋವಾ ಕಾರು ಮಡಿಕೇರಿಯಿಂದ ಮೈಸೂರು ರಸ್ತೆಯಲ್ಲಿ ತೆರಳಿದ್ದು ಸುಂಟಿಕೊಪ್ಪ, ಕುಶಾಲನಗರದಲ್ಲಿ ನಾಕಾಬಂಧಿ ಮಾಡಲಾಗಿದೆ. ಪ್ರವಾಸ ಬಂದ ಗೆಳೆಯರ ಮಧ್ಯೆ ಜಗಳವಾಗಿರೋ ಸಾಧ್ಯತೆ ಇದೆ. ಸದ್ಯ ಪೊಲೀಸರು ಸಿಸಿಟಿವಿ ಫೂಟೇಜ್ ಪರೀಕ್ಷಿಸುತ್ತಿದ್ದು ಈ ಪ್ರಕರಣ ಪೊಲೀಸರಿಗೆ ತಲೆಬಿಸಿ ತಂದಿದೆ.