ಗೇರುಕಟ್ಟೆ: ದಿನಸಿ ಅಂಗಡಿಯೊಂದರಲ್ಲಿ ಪಡಿತರದಾರರಿಗೆ ನೀಡುವ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯವರು ಪತ್ತೆ ಹಚ್ಚಿದ ಘಟನೆ ಜೂ.1ರಂದು ವರದಿಯಾಗಿದೆ.

ಕಳೆದ ಎರಡು ವಾರಗಳ ಹಿಂದೆ ಚಾರ್ಮಾಡಿಯಲ್ಲಿ ಅನ್ನಭಾಗ್ಯದ ಅಕ್ಕಿ ಪತ್ತೆಯಾದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಆಹಾರ ಇಲಾಖೆ ನಿಗಾ ಇಟ್ಟಿದ್ದು, ಖಚಿತ ಮಾಹಿತಿಯ ಮೇರೆಗೆ ಗೇರುಕಟ್ಟೆಯ ಈ ಅಂಗಡಿಗೆ ತಹಶೀಲ್ದಾರ್, ಆಹಾರ ಇಲಾಖಾಧಿಕಾರಿಗಳು, ಗ್ರಾಮಕರಣಿಕರು ಡಿಢೀರ್ ಭೇಟಿ ನೀಡಿ ಪ್ರಕರಣವನ್ನು ಪತ್ತೆ ಹಚ್ಚಿ, ಲಾರಿಗೆ ಲೋಡ್ ಆಗುತ್ತಿದ್ದ ಅಕ್ಕಿಯನ್ನು ಲಾರಿ ಸಹಿತ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.




























