ಹಾಸನ: ಜೆಡಿಎಸ್ ಕಾರ್ಪೋರೇಟರ್ ಭೀಕರ ಹತ್ಯೆ ಮಾಡಲಾಗಿದೆ. ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕಾರ್ಪೋರೇಟರ್ನನ್ನ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಇದು ಇಡೀ ಹಾಸನ ನಗರವನ್ನೇ ಬೆಚ್ಚಿ ಬೀಳಿಸಿದೆ.
ಹೌದು, ಹಾಸನದ ಜವೇನಹಳ್ಳಿ ಮಠದ ಬಳಿ ನಗರಸಭಾ ಸದಸ್ಯ ಪ್ರಶಾಂತ್ ಎಂಬುವವರನ್ನ ಕೊಲೆ ಮಾಡಿದ್ದಾರೆ. ತನ್ನ ಮನೆಗೆ ಹೊಂಡಾ ಆ್ಯಕ್ಟಿವಾದಲ್ಲಿ ತೆರಳುತ್ತಿದ್ದಾಗ, ಆಟೋದಲ್ಲಿ ಬಂದ ಸುಮಾರು ನಾಲ್ಕೈದು ಜನ ದುಷ್ಕರ್ಮಿಗಳ ತಂಡ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಸೇರಿ ಸುತ್ತಮುತ್ತಲ ಬಡಾವಣೆಯ ನಾಗರಿಕರು ಜಮಾಯಿಸಿದ್ದರು.


























