ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆಗೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೇ.30 ರಂದು ಪ್ರತಿಭಟನೆಯನ್ನು ನಡೆಸಿದ್ದರು.
ಮೇ.31 ರಂದು ಮಾಣಿಲ ಶ್ರೀಗಳು ಭೇಟಿ ನೀಡಿ, ಕ್ಷೇತ್ರದ ತಂತ್ರಿಗಳನ್ನು ಮತ್ತು ಜ್ಯೋತಿಷ್ಯರನ್ನು ಕರೆ ತಂದು ಒಂದು ದಿನದ ತಾಂಬೂಲ ಪ್ರಶ್ನೆ ನಡೆಸಿ, ಮತ್ತೆ ಕೆಲಸವನ್ನು ಮುಂದುವರೆಸಿ ಎಂದು ಶ್ರೀಗಳು ಸಲಹೆಯನ್ನು ನೀಡಿದ್ದರು. ಅದೇ ರೀತಿ ವಾಸ್ತು ಶಿಲ್ಪಿಗಳು ನಗರ ಸಭೆ ಸದಸ್ಯರಾದ ಜಗನ್ನಿವಾಸ್ ರಾವ್, ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತ್ತಡ್ಕ ರವರು ಭೇಟಿ ನೀಡಿದ್ದರು.
ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಈ ವಿಚಾರ ಮುಂದೆ ಯಾವ ತಿರುವುಗಳನ್ನು ಪಡೆಯಲಿದೆ ಎಂದು ಕಾದು ನೋಡಬೇಕಿದೆ..


























