ವಿಟ್ಲ: ಜೆಸಿಬಿ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕನ್ಯಾನ ಸಮೀಪ ನಡೆದಿದೆ.
ಮೃತರನ್ನು ಕಣಿಯೂರು ನಿವಾಸಿ ಅಸೈನಾರ್ ಪುತ್ರ ಆಕಿಲ್ (12) ಎಂದು ಗುರುತಿಸಲಾಗಿದೆ.

ಕಣಿಯೂರು ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಖಿಲ್ ಸಂಜೆ ಕನ್ಯಾನ ಹಾಲಿನ ಡಿಪೋಗೆ ಸೈಕಲಲ್ಲಿ ಹಾಲು ಕೊಡಲು ಹೋಗುತ್ತಿದ್ದಾಗ ಪಾನಮತ್ತ ಜೆಸಿಬಿ ಚಾಲಕನಿಂದಾಗಿ ಬಾಲಕ ಯಂತ್ರದ ಅಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಪಾನಮತ್ತ ಚಾಲಕ ಅದೇ ಜೆಸಿಬಿ ಮೂಲಕ ಬಾಲಕನ ಶವ ಮತ್ತು ಸೈಕಲನ್ನು ಎತ್ತಿ ರಸ್ತೆ ಬದಿಗೆ ಹಾಕಿ ಪರಾರಿಯಾಗಲು ಯತ್ನಿಸಿದ್ದರೂ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ವಶವಾಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

























