ಪುತ್ತೂರು: ಎಲ್ಲಾ ಕಡೆಗಳಲ್ಲೂ ಭಾರೀ ಸದ್ದು ಮಾಡುತ್ತಿರುವ ‘ರಾಜ್ ಸೌಂಡ್ಸ್ & ಲೈಟ್ಸ್’ ತುಳು ಚಿತ್ರವೂ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಅದೇ ರೀತಿ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಎರಡು ವಾರಗಳ ಹಿಂದೆ ತೆರೆ ಕಂಡ ‘ರಾಜ್ ಸೌಂಡ್ಸ್ & ಲೈಟ್ಸ್’ ಚಿತ್ರವೂ ಜೂ.5 ರಂದು ಬೆಳಗ್ಗಿನ, ಮಧ್ಯಾಹ್ನದ, ಸಂಜೆಯ ಮೂರು ಪ್ರದರ್ಶನಗಳಲ್ಲೂ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ..

‘ಒಂದು ಮೊಟ್ಟೆಯ ಕಥೆ’ ಚಿತ್ರ ತಂಡದ ನೇತೃತ್ವದಲ್ಲಿ, ವೈಭವ್ ಫಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್ ನಲ್ಲಿ ತಯಾರಾದ ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ತುಳು ಸಿನಿಮಾ ಬಿಡುಗಡೆಗೊಂಡ ಎಲ್ಲಾ ಟಾಕೀಸ್, ಮಾಲ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಅದೇ ರೀತಿ ಪುತ್ತೂರಿನಲ್ಲೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಾರದ ಪ್ರತಿದಿನವೂ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಪ್ರಿಯರು ಆಗಮಿಸುತ್ತಿದ್ದು, ವಾರಾಂತ್ಯದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಉತ್ತಮ ಮನರಂಜನೆಯ ಸಿನಿಮಾವಾದ ಕಾರಣ ಸಿನಿಪ್ರಿಯರು ಕುಟುಂಬ ಸಮೇತರಾಗಿ ಚಿತಮಂದಿರಕ್ಕೆ ಆಗಮಿಸಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ..




























