ಉಪ್ಪಿನಂಗಡಿ: ಮನೆಯಿಂದ ಕೆಲಸಕ್ಕೆಂದು ಹೊರಟಿದ್ದ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಅಂಬೂಡೇಲು ನಿವಾಸಿ ವರ್ಗೀಸ್ (29) ನಾಪತ್ತೆಯಾಗಿದ್ದಾರೆ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿದ್ದರು. ಮೇ 31ರಂದು ಮನೆಯಿಂದ ತೆರಳಿದವರು ವಾಪಸು ಬಂದಿಲ್ಲ.

ಅವರ ಸಹೋದರ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ತುಳು ಮಾತನಾಡಬಲ್ಲರು. ಅವರ ಮಾಹಿತಿ ಸಿಕ್ಕಿದಲ್ಲಿ ಉಪ್ಪಿನಂಗಡಿ ಠಾಣೆ (08251-251055) ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
























